ಬಡ ಕುಟುಂಬದಿಂದ ಬಂದಿದ್ದ ಯುವತಿ ಸ್ವಂತ ಮನೆ ಖರೀದಿಸಲು 20 ಯುವಕರನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿ, ಅವರಿಂದ ದುಬಾರಿ ಬೆಲೆಯ ಐಫೋನ್ಗಳನ್ನು ಗಿಫ್ಟ್ವಾಗಿ ಪಡೆದುಕೊಂಡಿದ್ದಾಳೆ. ಬಳಿಕ ಎಲ್ಲಾ ಫೋನ್ಗಳನ್ನು ಮಾರಾಟ ಮಾಡಿ, 14 ಲಕ್ಷಕ್ಕೂ ಅಧಿಕ ಬೆಲೆಗೆ ಹೊಸ ಮನೆ ಖರೀದಿಸಿದ್ದಾಳೆ.
ಹೇಗೆ ನಡೆದಿದೆ ಈ ಘಟನೆ?
ಚೀನಾದ Xiaoli ಎಂಬ ಯುವತಿ, 20 ಯುವಕರೊಂದಿಗೆ ಪ್ರೇಮ ನಾಟಕವಾಡಿ, ಪ್ರತಿಯೊಬ್ಬರಿಂದಲೂ ದುಬಾರಿ ಐಫೋನ್ಗಳನ್ನು ಗಿಫ್ಟ್ ಆಗಿ ಪಡೆದಿದ್ದಾಳೆ. ನಂತರ, ಅವರೊಂದಿಗೆ ಬ್ರೇಕ್ ಅಪ್ ಮಾಡಿಕೊಂಡು, 20 ಐಫೋನ್ಗಳನ್ನು ಮಾರಾಟ ಮಾಡಿ, ಬಂದ ಹಣದಿಂದ ಡೌನ್ ಪೇಮೆಂಟ್ನಲ್ಲಿ ಹೊಸ ಮನೆ ಖರೀದಿಸಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ಘಟನೆ 2016ರಲ್ಲಿ ನಡೆದಿದೆ. ಆದರೆ ಇತ್ತೀಚೆಗೆ, @tech_grammm ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈಕೆಯ ಕುರಿತ ಫೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಮೇ 06ರಂದು ಹಂಚಿಕೊಂಡಿರುವ ಈ ಪೋಸ್ಟ್, 187,016ಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದಿದೆ.
Also Read: Kissing ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿ! ಏನಿದು ಹೊಸ ಕಾಯಿಲೆ, ಲಕ್ಷಣಗಳೇನು?
ಬಡತನದಿಂದ ಸ್ವಂತ ಮನೆಗೆ
Xiaoliಬಡ ಕುಟುಂಬದಿಂದ ಬಂದಿದ್ದಳು. ಆದ್ದರಿಂದ, ಈ ರೀತಿ ಪ್ಲಾನ್ ಮಾಡಿ, 20 ಐಫೋನ್ಗಳನ್ನು ಮಾರಾಟ ಮಾಡಿ, 14 ಲಕ್ಷಕ್ಕೂ ಅಧಿಕ ಬೆಲೆಗೆ ಹೊಸ ಮನೆ ಖರೀದಿಸಿದ್ದಾಳೆ. ಈ ಘಟನೆಯು Xiaoliಯ ಚಾಣಾಕ್ಷತೆ ಮತ್ತು ತಂತ್ರವನ್ನು ತೋರಿಸುತ್ತದೆ.
ಅದರಂತೆ, Xiaoliತನ್ನ ಬಡತನವನ್ನು ಮೀರಿಸಿ, ಪ್ರೀತಿಯ ನಾಟಕದ ಮೂಲಕ ತನ್ನ ಗುರಿಯನ್ನು ಸಾಧಿಸಿದ್ದಾಳೆ. ಈಕೆಯ ಘಟನೆ ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.