Marriage: 70 ಲಕ್ಷ ಸಂಬಳ ಪಡೆದರೂ ಹುಡುಗನಿಗೆ ಮರ್ಯಾದೆಯೇ ಇಲ್ಲ! ಹುಡುಗಿ ಅಪ್ಪ ಹೇಳಿದ್ದೇನು?
ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಎಂಬ ದೂರು ಇದೀಗ ಕರ್ನಾಟಕದಲ್ಲೂ ಕೇಳಿಬರುತ್ತಿದೆ. ಸಾಮಾನ್ಯವಾಗಿ ಬೇಸಾಯ ಮಾಡುವ ಹುಡುಗರಿಗೆ ಹೆಣ್ಣು ಕೊಡುತ್ತಿಲ್ಲ ಎನ್ನುವ ದೂರು ಕೇಳಿದಿದ್ದೇವೆ, ಆದರೆ 70 ಲಕ್ಷ ರೂಪಾಯಿ ಸಂಬಳ ಪಡೆಯುವ ಹುಡುಗನಿಗೂ ಹುಡುಗಿಯ ಕಡೆಯವರು ಮರ್ಯಾದೆ ಕೊಡಲಿಲ್ಲ ಎಂದರೆ ನಂಬುತ್ತೀರಾ?
ಅಚ್ಚರಿ ಶಾದಿ ಪ್ರಸ್ತಾಪ
ಮಾಟ್ರಿಮೋನಿಯಲ್ ವೆಬ್ಸೈಟ್ ಶಾದಿ ಡಾಟ್ ಕಾಮ್ನಲ್ಲಿ ಮಹಿಳೆಯೊಬ್ಬರ ಪ್ರೊಫೈಲ್ ಮೆಚ್ಚಿಕೊಂಡು ವ್ಯಕ್ತಿಯೊಬ್ಬರು ಸಂದೇಶ ಕಳುಹಿಸಿದ್ದು, ಉತ್ತರಕ್ಕೆ ಶಾಕ್ ಆಗಿದ್ದಾರೆ. ಬೆಂಗಳೂರಿನ 28 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ರಾಹುಲ್, ಪ್ರಿಯಾಂಕಾ ಎಂಬ ಮಹಿಳೆಗೆ ಸಂದೇಶ ಕಳುಹಿಸಿ, ತನ್ನನ್ನು ಪರಿಚಯಿಸಿಕೊಂಡರು. ರಾಹುಲ್, ತಾನು ವಾರ್ಷಿಕ ₹ 70 ಲಕ್ಷ ಸಂಬಳ ಪಡೆಯುತ್ತೇನೆ ಎಂದೂ, “ನನಗೆ 70 ಲಕ್ಷ ರೂಪಾಯಿ ಸಂಬಳ, ನಮ್ಮಿಬ್ಬರಿಗೂ ಹೊಂದಾಣಿಕೆಯಾಗುತ್ತದೆ” ಎಂದು ಸಂದೇಶದಲ್ಲಿ ಹೇಳಿದ್ದಾರೆ.

ಕ್ರೀಕಟ್ ಪ್ರಿಯ ತಂದೆಯ ಉತ್ತರ
ಪ್ರಿಯಾಂಕಾ ಅವರ ತಂದೆ, ಕ್ರಿಕೆಟ್ ಪ್ರೇಮಿಯಾಗಿದ್ದು, ರಾಹುಲ್ ಸಂದೇಶ ಕಳುಹಿಸಿದಾಗ, “ಹಲೋ, ಧನ್ಯವಾದಗಳು! ನಾನು ಪ್ರಿಯಾಂಕಾ ಅವರ ತಂದೆ.ಪಡ್ಯದ ನಂತರ ಮಾತನಾಡೋಣ” ಎಂದು ಉತ್ತರ ನೀಡಿದರೆ, ರಾಹುಲ್ ಅಚ್ಚರಿಗೊಂಡರು. ಈ ಎಕ್ಸ್ಚೇಂಜ್ನ ಸ್ಕ್ರೀನ್ಶಾಟ್ ಅನ್ನು ರಾಹುಲ್ ಅವರ ಸಂಬಂಧಿ ನೈನಾ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದರು. ಒಂದೇ ದಿನದಲ್ಲಿ, ಈ ಪೋಸ್ಟ್ ಅರ್ಧ ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ ಮತ್ತು ಹಲವಾರು ಪ್ರತಿಕ್ರಿಯೆಗಳು ಬಂದಿವೆ.
My cousin was looking for rishta on https://t.co/BMuHYGCkZu during the match and this happened 😂 pic.twitter.com/l7IwmXUKDO
— Naina (@Naina_2728) June 28, 2024
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು
“ಅಂಕಲ್ ಅವರ ಆದ್ಯತೆಗಳು ಸ್ಪಷ್ಟವಾಗಿವೆ. ಭಾರತವು ಇಂಗ್ಲೆಂಡ್ ಅನ್ನು ಸೋಲಿಸಿದ ನಂತರ ಮಾತನಾಡಬಹುದು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಭಾರತ ಆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್ಗಳಿಂದ ಗೆದ್ದು ಬೀಗಿತ್ತು. “ಮದುವೆಗಳು ನಡೆಯುತ್ತಲೇ ಇರುತ್ತವೆ, ಪಂದ್ಯಕ್ಕೆ ಯಾವುದೂ ಅಡ್ಡಿಯಾಗಬಾರದು” ಎಂದು ಮತ್ತೊಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
Also Read: T20 ವಿಶ್ವಕಪ್ ಗೆಲುವು: ರೋಹಿತ್, ಕೊಹ್ಲಿ, ದ್ರಾವಿಡ್ಗೆ ಮೋದಿ ಕರೆ, ಟೀಂ ಇಂಡಿಯಾವನ್ನು ಅಭಿನಂದಿಸಿದ ಪ್ರಧಾನಿ
ಫೈನಲ್ ಪಂದ್ಯ ಮತ್ತು ಮದುವೆ ಮಾತುಕತೆ
ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಅಂತಿಮ ಪಂದ್ಯ ಮುಗಿದ ನಂತರ ಭಾರತ ಟ್ರೋಫಿ ಎತ್ತಿದ ನಂತರವೇ ರಾಹುಲ್ ಮತ್ತು ಪ್ರಿಯಾಂಕಾ ಅವರ ಮದುವೆ ಮಾತುಕತೆ ನಡೆಯಬಹುದು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.