ಸ್ಕೂಟರನ್ನು ಸಮುದ್ರಕ್ಕೆ ಇಳಿಸಿದ ಯುವಕ ರೀಲ್ಸ್ ಹುಚ್ಚಾಟ
ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ರೀಲ್ಸ್ ಹುಚ್ಚಿನಿಂದ ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ, ಮತ್ತು ಈ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಇತ್ತೀಚೆಗೆ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲೊಬ್ಬ ಯುವಕನು ಅಬ್ಬರಿಸುವ ಅಲೆಗಳ ನಡುವೆ ತನ್ನ ಸ್ಕೂಟರ್ ಜೊತೆಗೆ ನೀರಿಗೆ ಇಳಿದಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಯುವಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೋಪಗೊಂಡಿದ್ದಾರೆ.
ರೀಲ್ಸ್ ಮಾಡೋದು ಈಗ ಯುವ ಸಮುದಾಯದಲ್ಲಿ ಹೊಸ ಟ್ರೆಂಡ್ ಆಗಿದೆ. ಆದರೆ, ಈ ರೀಲ್ಸ್ ಹುಚ್ಚಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಕೆಲವು ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೆ, ಇಲ್ಲೊಬ್ಬ ಯುವಕನೊಬ್ಬ, ತನ್ನ ಸ್ಕೂಟರ್ ಅನ್ನು ಸಮುದ್ರದ ಅಲೆಗಳ ನಡುವೆ ಇಳಿಸಿರುವ ಸಾಹಸಕ್ಕೆ ಹೋಗಿದ್ದಾನೆ. ವಿಡಿಯೋದಲ್ಲಿ, ಯುವಕನು ದೊಡ್ಡ ಅಲೆಗಳು ಬಂದರೂ ಸಹ ಸ್ಕೂಟರ್ ಜೊತೆಗೆ ನೀರಿಗೆ ಇಳಿದು, ಯಾವುದೇ ಭಯವಿಲ್ಲದೆ ಸ್ಕೂಟರ್ ಅನ್ನು ಮುಂದಕ್ಕೆ ಓಡಿಸುತ್ತಿರುವುದನ್ನು ನೋಡಬಹುದು.
Also Read: ಪಿಎಂ ಆವಾಸ್ ಯೋಜನೆ: ಹಣ ಬಂದ ಕೂಡಲೇ ಗಂಡಂದಿರಿಗೆ ಗುಡ್ ಬೈ ಹೇಳಿ 11 ಮಹಿಳೆಯರು ಪ್ರೇಮಿಗಳ ಜೊತೆ ಪರಾರಿ

The Figenಎನ್ನುವ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. “ಗೂಗಲ್ ಮ್ಯಾಪ್ ನಂಬಿ ಹೋದರೆ ಹೀಗೆ ಆಗೋದು” ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಇಲ್ಲದಿದ್ದರೂ, ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನು ತನ್ನ ಸ್ಕೂಟರ್ನಲ್ಲಿ ಕುಳಿತು, ಹೆಲ್ಮೆಟ್ ಹಾಕಿ, ಸಮುದ್ರದ ನೀರಿನಲ್ಲಿ ಸ್ಕೂಟರ್ ಓಡಿಸುತ್ತಿರುವುದು ಸ್ಪಷ್ಟವಾಗುತ್ತದೆ.
When you pay attention to Google Maps.
pic.twitter.com/xfCoMIcvOs
— Figen (@TheFigen_) July 1, 2024
ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ, ದೊಡ್ಡದಾದ ಅಲೆಗಳು ಮುಂಭಾಗದಿಂದ ಬರುತ್ತಿವೆ. ಆದರೆ, ಯುವಕನು ಯಾವುದಕ್ಕೂ ಭಯಪಡದೇ, ಸ್ಕೂಟರ್ ಅನ್ನು ಮುಂದಕ್ಕೆ ಓಡಿಸುತ್ತಿದ್ದಾನೆ. ಕೊನೆಗೆ, ಒಂದು ದೊಡ್ಡ ಅಲೆ ಬಂದಾಗ, ಸ್ಕೂಟರ್ ಅನ್ನು ಮತ್ತೆ ದಡದತ್ತ ತಿರುಗಿಸುತ್ತಾನೆ. ಈ ವಿಡಿಯೋವು ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಈತನ ವಿರುದ್ಧ ಕೋಪಗೊಂಡು ವಿವಿಧ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕರು ಈ ರೀತಿಯ ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.