ಟ್ರಂಪ್ ಮತ್ತೆ ಅಧ್ಯಕ್ಷರಾದರೆ ಎಂಥ ಅಲ್ಲೋಲ ಕಲ್ಲೋಲ ಆಗಿಬಿಡಬಹುದು ಎಂಬ ಆತಂಕವನ್ನು ಇಂದಿನ ಸಾಕಷ್ಟು ಜನರು ಹೊಂದಿದ್ದಾರೆ. “ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನೇ ಮುಗಿಸಿಬಿಡ್ತಾರೆ” ಅಂತ ಜೋ ಬೈಡನ್ ಕೂಡಾ ಹೇಳಿದ್ದಾರೆ. ಈ ಅನಿಶ್ಚಿತತೆಗೆ ಕಾರಣವಾಗಿರುವುದು ಪ್ರಾಜೆಕ್ಟ್-2025!
ಅಮೆರಿಕಾದಲ್ಲಿ ಪ್ರಾಜೆಕ್ಟ್-2025:
ಭಾರತದಲ್ಲಿ ಪ್ರಾಜೆಕ್ಟ್-ಕೆ (Project-K) ಸಿನೆಮಾ ಸದ್ದು ಮಾಡುತ್ತಿದ್ರೆ, ಅಮೆರಿಕಾ ಸೇರಿದಂತೆ ಇಡೀ ವಿಶ್ವವನ್ನೇ ಡೋನಾಲ್ಡ್ ಟ್ರಂಪ್ಪ್ರಪೋಸ್ ಮಾಡಿರುವ ಪ್ರಾಜೆಕ್ಟ್-2025 ಶೇಕ್ ಮಾಡುತ್ತಿದೆ. ಅಮೆರಿಕಾದಲ್ಲಿ ಡೆಮಾಕ್ರಸಿ ಕೊನೆಯಾಗುತ್ತಾ? ಅಲ್ಲಿಗೆ ಏಕನಾಯಕ ಆಡಳಿತ ಬರುತ್ತಾ? ಮಿಲಿಟರಿಯಲ್ಲಿ ಬದಲಾವಣೆಗಳು ಎಂಥ ಪರಿಣಾಮ ಬೀರುತ್ತವೆ? ಭಾರತದ ಆಡಳಿತ ಪಕ್ಷವನ್ನ ಹಿಂದೂ ನ್ಯಾಷನಲಿಸ್ಟ್ ಅಂತ ಮೂದಲಿಸುವ ಅಮೆರಿಕಾದ ಮಾಧ್ಯಮಗಳು ಈಗ ಏನ್ಮಾಡ್ತವೆ? ಅಷ್ಟಕ್ಕೂ ಏನಿದು ಟ್ರಂಪ್ ಪ್ರಾಜೆಕ್ಟ್-2025?

ಕಾಂಟ್ರವರ್ಷಿ ಅಧ್ಯಕ್ಷ ಟ್ರಂಪ್!
ಡೋನಾಲ್ಡ್ ಟ್ರಂಪ್, ಅಮೆರಿಕ ಕಂಡ ಅತ್ಯಂತ ಕಾಂಟ್ರವರ್ಷಿಯಲ್ ಅಧ್ಯಕ್ಷರಲ್ಲಿ ಒಬ್ಬ. ದೇಶಪ್ರೇಮಿ, ರಾಷ್ಟ್ರೀಯವಾದಿ ಎಂಬ ಹೆಗ್ಗಳಿಕೆ ಜೊತೆಗೆ ನೈತಿಕವಾಗಿ ಅಧಃಪತನವನ್ನೂ ಕಂಡಿದ್ದಾರೆ. ಬ್ಲಾಕ್ ಲೈವ್ಸ್ ಮ್ಯಾಟರ್ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿ, ಜೊ ಬೈಡನ್ ಗೆ ಆಡಳಿತ ಕೊಟ್ಟಿದ್ದರು.
Also Read: ವೈರಲ್: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ, ದೇವರಂತೆ ಬಂದು ಆಕೆಯನ್ನು ಕಾಪಾಡಿದ ಬೀದಿ ನಾಯಿ
ಬೈಡನ್ ನೇಪಥ್ಯಕ್ಕೆ ಸರಿಯುತ್ತಾರಾ?
ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರವೂ ಬೈಡನ್, ಬರಾಕ್ ಒಬಾಮರ ಶ್ಯಾಡೋ ಸರ್ಕಾರ ಎನ್ನುವ ಟೀಕೆಯನ್ನು ಎದುರಿಸುತ್ತಿದ್ದಾರೆ. 81 ವರ್ಷ ವಯಸ್ಸಿನ ಬೈಡನ್ದೈಹಿಕವಾಗಿ ಮತ್ತು ಮಾನಸಿಕವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಪ್ರಪಂಚದ ಅತಿ ಶಕ್ತಿವಂತ ದೇಶದ ವೀಕ್ ಅಧ್ಯಕ್ಷ ಎಂಬ ಕಟು ಟೀಕೆಗೂ ಅವರು ಒಳಗಾಗಿದ್ದಾರೆ. ಇತ್ತೀಚಿನ ಪ್ರೆಸಿಡೆನ್ಶಿಯಲ್ ಡಿಬೇಟ್ ನೋಡಿದವರಿಗೆ, ಟ್ರಂಪ್ ಅಧ್ಯಕ್ಷರಾಗೋದು ಬಹುದೊಡ್ಡ ಅಚ್ಚರಿಯ ವಿಷಯವಲ್ಲ ಎಂದು ತೋರಿಸುತ್ತಿದೆ.

ಟ್ರಂಪ್ ಘೋಷಿಸಿದ ಪ್ರಾಜೆಕ್ಟ್-2025!
ಅಮೆರಿಕಾದ ಬಲಪಂಥೀಯ ಹೆರಿಟೇಜ್ ಫೌಂಡೇಶನ್ ಟ್ರಂಪ್ ಆಡಳಿತಕ್ಕೆ ಬಂದರೆ ಮಾಡುವ ಕಾರ್ಯಗಳ ಬಗ್ಗೆ 30 ಅಧ್ಯಾಯ, 900 ಪುಟಗಳ ವಿಶನ್ ಪುಸ್ತಕವನ್ನು ಬಿಡುಗಡೆ ಮಾಡಿದೆ. “ಮ್ಯಾಂಡೇಟ್ ಫಾರ್ ಲೀಡರ್ಶಿಪ್: ದಿ ಕನ್ಸರ್ವೇಟಿವ್ ಪ್ರಾಮಿಸ್” ಎಂಬ ಈ ಪುಸ್ತಕ ಅಮೆರಿಕಾದ ರಾಜಕಾರಣವನ್ನೇ ಬದಲಿಸಬಹುದಾದ ಪ್ರಸ್ತಾಪಗಳನ್ನು ಒಳಗೊಂಡಿದೆ.
Also Read: ಕೇರಳವನ್ನು ಕಾಡುತ್ತಿದೆ ಮೆದುಳು ತಿನ್ನುವ ಅಮೀಬಾ ಸೋಂಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್
Project 2025 is the most un- American platform since succession.
It must be stopped. pic.twitter.com/oLIEvpSdQK
— Chris Hahn (@ChristopherHahn) July 5, 2024
ಹಾಗಾದರೆ ಏನಿದೆ ಈ ಡಾಕ್ಯುಮೆಂಟ್ನಲ್ಲಿ?
ಡಾಕ್ಯುಮೆಂಟ್ನಲ್ಲಿ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ 5 ಅಂಶಗಳನ್ನು ನೋಡೋಣ…
- 50 ಸಾವಿರ ಜನರಿಗೆ ಕೊಕ್: 2016-20 ರ ಅವಧಿಯಲ್ಲಿ ಟ್ರಂಪ್ ಹೆಚ್ಚಿನ ಟೀಕೆಯನ್ನು ಎದುರಿಸಿದ್ದರು. ಈ ಬಾರಿ ಸುಮಾರು 50 ಸಾವಿರ ಫೆಡರಲ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿ, ತಮ್ಮ ಬೆಂಬಲಿಗರನ್ನು ನೇಮಕ ಮಾಡಬಹುದು.
- ಅಕ್ರಮ ವಲಸಿಗರಿಗೆ ಗುಡ್ ಬೈ: ಪ್ರಾಜೆಕ್ಟ್-2025 ಅನ್ವಯ, ಟ್ರಂಪ್ ಸುಮಾರು 2 ಕೋಟಿ ಅಕ್ರಮ ವಲಸಿಗರಿಗೆ ಗೇಟ್ ಪಾಸ್ ನೀಡಬಹುದು. ಒಳ ಬರುವವರಿಗೂ ಕಠಿಣ ನಿಯಮಗಳನ್ನು ರೂಪಿಸಬಹುದು.
- ವಿದೇಶಾಂಗ ನೀತಿ: ಭಾರತಕ್ಕೆ ಟ್ರಂಪ್ ಬೆಂಬಲ ನೀಡಬಹುದು. ಚೀನಾ ಎದುರಿಸಲು ಭಾರತವನ್ನು ಸಶಕ್ತ ರಾಷ್ಟ್ರವನ್ನಾಗಿ ಬೆಂಬಲಿಸುತ್ತಾರೆ.
- ಶಿಕ್ಷಣ: ಜೆಂಡರ್ ಫ್ಲುಯಿಡ್ನೆಸ್ ಅನ್ನು ಕಡಿವಾಣ ಹಾಕಲು ಟ್ರಂಪ್ ಉದ್ದೇಶಿಸಿದ್ದಾರೆ. ಶಿಕ್ಷಣದಲ್ಲಿ ವೋಕಿಸಂಗೆ ವಿರೋಧಿಯಾಗಿದ್ದಾರೆ.
- ಕ್ರಿಶ್ಚಿಯನ್ ನ್ಯಾಷನಲಿಸಮ್: ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರವಲ್ಲ ಎಂದು ಟ್ರಂಪ್ ಹೇಳಿದ್ದು, ಅತೀಶಯ ಧಾರ್ಮಿಕ ಧೋರಣೆಗಳಿಗೆ ಎದುರಿಸುತ್ತಿದ್ದಾರೆ.
ಟ್ರಂಪ್ ಈ ಪ್ರಾಜೆಕ್ಟ್-2025 ಅನ್ನು ಘೋಷಿಸಿದ ನಂತರ, ಅಮೆರಿಕಾದ ರಾಜಕೀಯದಲ್ಲಿ ಹಲವು ಬದಲಾವಣೆಗಳು ತರಬಹುದು ಎಂಬ ಆತಂಕ ವಿದಿತವಾಗಿದೆ. ಪ್ರಜಾಪ್ರಭುತ್ವದ ಮುಗಿಮುಖ, ಸರ್ವಾಧಿಕಾರಿ ಸ್ಥಾಪನೆ, ಮಿಲಿಟರಿ ಬದಲಾವಣೆಗಳು ಇತ್ಯಾದಿ ವಿಚಾರಗಳು ವಿಶ್ವದ ಶಾಂತಿಗೆ ಧಕ್ಕೆ ತರುವ ಸಾಧ್ಯತೆಗಳೆಡೆಗೆ ಬೆಳಕು ಚೆಲ್ಲುತ್ತಿವೆ.