ಮಧ್ಯರಾತ್ರಿ ವಿಚಿತ್ರ ಕೂಗು – ಕೌತುಕಗಳ ನಡುವೆ ಡಾ. ಬ್ರೋ
ಜಾರ್ಜಿಯಾ ಪ್ರವಾಸದಲ್ಲಿರುವ ಡಾ. ಬ್ರೋ ಅರ್ಥಾತ್ ಗಗನ್ ಶ್ರೀನಿವಾಸ್, ತಮ್ಮ ಹಾಸ್ಯಭರಿತ ಶೈಲಿಯಲ್ಲಿ ಕನ್ನಡದಲ್ಲಿಯೇ ಜಾರ್ಜಿಯಾದ ಅಪರೂಪದ ಹಾಗೂ ಮನಮೋಹಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿಯ ಭಯಾನಕ, ವಿಚಿತ್ರ ಕೂಗುಗಳಿಂದ ಹಿಡಿದು ಬೆಳಗಿನ ಸುಂದರ ನೋಟಗಳ ತನಕ ತಮ್ಮ ಅನುಭವವನ್ನು ವಿವರಿಸಿದ್ದಾರೆ.
ಮಧ್ಯರಾತ್ರಿ ಅನುಭವಗಳು
ಡಾ. ಬ್ರೋ, ಮಧ್ಯರಾತ್ರಿ ತಮ್ಮ ಟೆಂಟ್ನಲ್ಲಿದ್ದಾಗ ಕೇಳಿದ ವಿಚಿತ್ರ ಕೂಗುಗಳ ಬಗ್ಗೆ ವಿವರಿಸಿದ್ದಾರೆ. ಈ ಶಬ್ದಗಳು ಪ್ರಾರಂಭದಲ್ಲಿ ಕಪ್ಪೆಗಳ ಶಬ್ದವೆಂದು ಭಾಸವಾದರೂ, ಮಧ್ಯರಾತ್ರಿಯಲ್ಲಿನ ಆ ಕೂಗುಗಳು ನಡುಕ ಹುಟ್ಟಿಸುವಂತಿದೆಯೆಂದು ಹೇಳಿದ್ದಾರೆ. ಅವರು ಆ ಭಯಾನಕ ಶಬ್ದಗಳನ್ನು ವಿಡಿಯೋದಲ್ಲಿಯೇ ತೋರಿಸಿದ್ದಾರೆ.
ಬೆಳಗಿನ ಸುಂದರ ದೃಶ್ಯಗಳು
ಬೆಳಗ್ಗೆ ಬಲಕಿದಾಗ, ಜಾರ್ಜಿಯಾದ ಸುಂದರ ಪ್ರಕೃತಿಯೊಂದಿಗೆ ಅವರ ಕಣ್ಮನ ಸೆಳೆಯುವ ದೃಶ್ಯಗಳನ್ನು ತೋರಿಸಿದ್ದಾರೆ. ಸ್ವರ್ಗದಲ್ಲಿ ಇರುವಂತೆ ಭಾಸವಾಗುವ, ಸುಂದರ ಪ್ರಕೃತಿಯ ರಮ್ಯಕಾವ್ಯವನ್ನು ಡಾ. ಬ್ರೋತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಾರೆ.

ಡಾ. ಬ್ರೋ: 22ರ ಹರೆಯದ ಸಾಧಕ
22ರ ಹರೆಯದ ಈ ಯುವಕ “ನಮಸ್ಕಾರ ದೇವ್ರು” ಖ್ಯಾತಿಯ ಡಾ. ಬ್ರೋ, ಯೂಟ್ಯೂಬ್ನಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅನೇಕ ದೇಶಗಳನ್ನು ಸುತ್ತಿ, ಅಲ್ಲಿನ ವೈವಿಧ್ಯಮಯ ಸ್ಥಳಗಳನ್ನು ಕನ್ನಡದಲ್ಲಿ ಪರಿಚಯ ಮಾಡಿಸುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್ದಂಥ ದೇಶಗಳಲ್ಲಿಯೂ ಸಾಹಸ ಮಾಡಿರುವ ಡಾ. ಬ್ರೋ, ಕನ್ನಡದಲ್ಲಿ ಮಾತನಾಡುತ್ತ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.
Also Read: ವೈರಲ್ ವೀಡಿಯೋ: ಇಂಡಿಗೋ ವಿಮಾನದಲ್ಲಿ ರೀಲ್ಸ್ ಕ್ವೀನ್ನ ನೃತ್ಯ! ನೆಟ್ಟಿಗರ ಮಿಶ್ರ ಪ್ರತಿಕ್ರಿಯೆಗಳು
ಪ್ರೀತಿಯ ಕತೆ: ಅಲಿ ಮತ್ತು ನಿನೋ
ಇದಕ್ಕೂ ಮುನ್ನ, ಜಾರ್ಜಿಯಾದಲ್ಲಿ ನಡೆದ ಕುತೂಹಲಕರ ಪ್ರೇಮಕಥೆಯೊಂದನ್ನು ಡಾ. ಬ್ರೋ ವಿವರಿಸಿದ್ದಾರೆ. ಮುಸ್ಲಿಂ ಹುಡುಗ ಅಲಿ ಮತ್ತು ಕ್ರಿಶ್ಚಿಯನ್ ಹುಡುಗಿ ನಿನೋ, ಇವರ ಪ್ರೇಮ ಧರ್ಮ, ಜಾತಿಯ ಭೇದಗಳನ್ನು ಮೀರಿ ನಡೆದುಬಂದಿತ್ತು. ಅಲಿ ಅಜರ್ಬೇಜಾನಿ ದೇಶದವನು, ನಿನೋ ಜಾರ್ಜಿಯಾದ ರಾಜಕುಮಾರಿ. ಇವರ ಮದುವೆಗೆ ಧರ್ಮ ಹಾಗೂ ಅಂತಸ್ತು ಅಡ್ಡಿಬಂದರೂ, ಪ್ರೀತಿಯ ಬಲವಂತಾಗಿತ್ತು.
ಪ್ರೇಮದ ಸಂಕೇತ: ಅಮರ ಪ್ರೀತಿಯ ಪ್ರತಿಮೆ
ಜಾರ್ಜಿಯಾದ ಬಟುಮಿಯಲ್ಲಿನ ಪ್ರೇಮದ ಸಂಕೇತವಾಗಿ ನಿಂತಿರುವ ಅಲಿ ಮತ್ತು ನಿನೋ ಅವರ ಪ್ರತಿಮೆ, ಆಕೃತಿಗಳು ಗಂಟೆಗೆ ಒಮ್ಮೆ ನೃತ್ಯಮಾಡುತ್ತಾ, ಸಮಾಗಮಗೊಳ್ಳುತ್ತವೆ. ಈ ಪ್ರತಿಮೆ, ಸಮುದ್ರದ ಜೊತೆ ಸೂರ್ಯಾಸ್ತದ ಕಿರಣಗಳಲ್ಲಿ ಮನಸ್ಸನ್ನು ಕಸಿದುಕೊಳ್ಳುತ್ತದೆ.
ಡಾ. ಬ್ರೋ ಅವರ ಈ ಜಾರ್ಜಿಯಾ ಪ್ರವಾಸ, ಮನಮೋಹಕ ದೃಶ್ಯಗಳು ಮತ್ತು ಕುತೂಹಲಕರ ಕಥೆಗಳು, ಕನ್ನಡಿಗರಿಗೆ ಜಗತ್ತನ್ನು ಹೊಸಕಣ್ಣಿನಿಂದ ತೋರಿಸುತ್ತಿದೆ.