ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?
ಇತ್ತೀಚಿಗೆ ತೂಕ ಇಳಿಸೋದು ಅಂದ್ರೆ ದೊಡ್ಡ ಸವಾಲಿನ ಕೆಲಸವಾಗಿದೆ. ಚಿಕ್ಕ ವಯಸ್ಸಿನಲ್ಲೇ ಅಧಿಕ ತೂಕ ಹೊಂದುವುದು ಮತ್ತು ಬಳಿಕ ತೂಕ ಇಳಿಸಲು ಪರದಾಡುವುದು ಇಂದಿನ ಹಲವು ಸಮಸ್ಯೆಗಳಲ್ಲಿ ಒಂದಾಗಿದೆ. ತೂಕ ಇಳಿಸಲು ಹಲವರು ಡಯೆಟ್, ಜಿಮ್, ಕಸರತ್ತು, ಓಡುವುದು, ವ್ಯಾಯಾಮ, ಯೋಗ, ಔಷಧಿ ಸೇರಿ ಹತ್ತಾರು ರೀತಿಯ ಪರಿಹಾರಕ್ಕೆ ಮುಂದಾಗುತ್ತಾರೆ. ಆದರೆ ಅದು ಅಷ್ಟೊಂದು ಸುಲಭವಲ್ಲ. ಕೆಲವೊಮ್ಮೆ ತೂಕ ಇಳಿಸುವುದು ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. 1 ಕೆ.ಜಿ ತೂಕ ಇಳಿಸಲು ತಿಂಗಳುಗಳ ಕಾಲ ಕಷ್ಟಪಡುಬೇಕಾಗುತ್ತದೆ. ಆದರೆ ಕಠಿಣ ಶ್ರಮ, ಶ್ರದ್ಧೆಯಿಂದ ಕೆಲವರು ತಾವು ಅಂದುಕೊಂಡಂತೆ ತೂಕ ಇಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಆದರೆ ಈಗ ತೂಕ ಇಳಿಸಲು ಹೊಸದೊಂದು ಸಿದ್ಧಾಂತ ರೂಪಗೊಂಡಿದೆ. ತೂಕ ಇಳಿಸಲು ಕಷ್ಟಪಡುತ್ತಿದ್ದವರು ಈ ವಿಭಿನ್ನ ಸಿದ್ಧಾಂತ ಕಂಡು ಅಚ್ಚರಿಯ ಜೊತೆಗೆ ಏನಿದು ಹೊಸ ರೂಪಕ ಎಂದು ಕುತೂಹಲದಿಂದ ನೋಡುತ್ತಿದ್ದಾರೆ. ಹೌದು, ಅದೇ 2-2-2 ವಿಧಾನ.

2-2-2 ವಿಧಾನ: ಏನದು?
2-2-2 ವಿಧಾನ ಈಗ ಇಂಟರ್ನೆಟ್ನಲ್ಲಿ ಭಾರೀ ಸುದ್ದಿಯಾಗುತ್ತಿದೆ. ಫಿಟ್ನೆಸ್ ಟ್ರೈನರ್ಗಳು, ವೈದ್ಯರು ಸೇರಿ ಹಲವರು ಈ ವಿಧಾನಕ್ಕೆ ಮೊರೆ ಹೋಗಿದ್ದಾರೆ. ಈ ವಿಧಾನದ ಮೂಲಕ ಸುಲಭವಾಗಿ ತೂಕ ಇಳಿಸಬಹುದು ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಹಾಗಾದರೆ ಏನಿದು 2-2-2 ವಿಧಾನ?
2-2-2 ವಿಧಾನ ಎಂದರೇನು?
2-2-2 ಎಂದರೆ ಯಾವುದೋ ಗಣಿತದ ದೊಡ್ಡ ಸೂತ್ರವಲ್ಲ. ಇದು ದಿನದಲ್ಲಿ 2 ಬಾಟಲಿ ನೀರು, 2 ಬಾರಿ ಹಣ್ಣು ಮತ್ತು ತರಕಾರಿ ಸೇವನೆ ಮತ್ತು 2 ಬಾರಿ ನಡೆಯುವುದು ಎಂಬ ಸರಳ ಸೂತ್ರವಾಗಿದೆ. ಈ ಸೂತ್ರವನ್ನು ಹಿಂದಿನಿಂದಲೂ ಅನುಸರಿಸಿ ತೂಕ ಇಳಿಸಲು ಮುಂದಾಗಿರುವವರು ಸಹ ಇರಬಹುದು. ಆದರೆ ಇದನ್ನು ನಿತ್ಯ ಕಟ್ಟು ನಿಟ್ಟಾಗಿ ಪಾಲಿಸಿದರೆ ಖಚಿತವಾಗಿ ತೂಕ ಇಳಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ವಿಧಾನವನ್ನು ಹೇಗೆ ಅನುಸರಿಸಬೇಕು?
ಕೇವಲ ಈ 2-2-2 ಸೂತ್ರದ ಮೂಲಕ ತೂಕ ಇಳಿಸುತ್ತೇನೆ ಎಂದುಕೊಂಡಿದ್ದರೆ ಅದು ತಡವಾಗಲೂಬಹುದು. ಹೀಗಾಗಿ ಇದರ ಜೊತೆಗೆ ನಿಯಮಿತ ವ್ಯಾಯಾಮ, ಡಯಟಿಂಗ್, ಸೈಕ್ಲಿಂಗ್, ಜಿಮ್ ಹೀಗೆ ಎಲ್ಲಾ ವಿಧಾನವನ್ನು ನಿತ್ಯವು ತಪ್ಪಿಸದೆ ಕ್ರಮಬದ್ಧವಾಗಿ ಮಾಡಿದ್ದೇ ತೂಕ ಇಳಿಕೆಯ ಫಲಿತಾಂಶ ನೋಡಬಹುದು.
ಇದೇನದು 2-2-2 ಸೂತ್ರದ ಪ್ರಯೋಜನ?
ಪ್ರತಿಯೊಬ್ಬರು ಇಂತಹ ಸುಲಭದ ವಿಧಾನ ಅನುಸರಿಸಲು ಉತ್ಸುಕರಾಗಿದ್ದಾರೆ. ಏಕೆಂದರೆ ತೂಕ ಇಳಿಸಲು ಮುಂದಾದವರು ಹತ್ತಾರು ರೀತಿಯ ಕಠಿಣ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಉಪವಾಸ ಮಾಡುವುದು, ಅಲ್ಪ ಆಹಾರ ಸೇವನೆ, ಇಡೀ ದಿನ ವ್ಯಾಯಾಮ ಹೀಗೆ ಕಠಿಣ ನಿಯಮದ ನಡುವೆ ಈ 2-2-2 ವಿಧಾನ ಅವರಲ್ಲಿ ನೆಮ್ಮದಿಯ ನಿಟ್ಟುಸಿರು ತಂದಿದೆ. ಈ ಸೂತ್ರ ಸುಲಭವಾಗಿ ಯಾರು ಬೇಕಾದರು ಅನುಸರಿಸಬಹುದಾಗಿದೆ.

ತೂಕ ಇಳಿಸಲು ನೆರವಾಗುವ ತರಕಾರಿಗಳು:
- ತರಕಾರಿಗಳು: ಪಾಲಾಕ್, ಇತರ ಸೊಪ್ಪುಗಳು, ಟೊಮೆಟೊ, ಈರುಳ್ಳಿ, ಬೆಂಡೆಕಾಯಿ, ಅಣಬೆ, ಕ್ಯಾಬೇಜ್, ಹೂಕೋಸು, ಬ್ರೊಕೋಲಿ
- ಹಣ್ಣುಗಳು: ಪಪ್ಪಾಯಿ, ಕಿತ್ತಳೆ, ಹುಣಸೆಹಣ್ಣು, ಸೇಬು, ಕಲ್ಲಂಗಡಿ, ಕರ್ಬೂಜ, ಬಾಳೆಹಣ್ಣು
- ಕಾಳುಗಳು: ಬಾದಾಮಿ, ಪಿಸ್ತಾ, ಕಡಲೆ ಬೀಜ, ಕುಂಬಳಕಾಯಿ ಬೀಜ, ಅಗಸೆ ಬೀಜ ಮುಂತಾದವುಗಳು
- ಸಂಬಾರ ಪದಾರ್ಥಗಳು: ಅರಿಶಿಣ, ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಕಾಳುಮೆಣಸು, ಮೆಂತೆ, ಏಲಕ್ಕಿ ಮುಂತಾದವು
- ಪ್ರೊಟೀನ್ಗಾಗಿ: ಪನ್ನೀರ್, ಟೋಫು
Also Read: ಎದೆ ನೋವು, ದವಡೆ ನೋವು ಒಟ್ಟಿಗೆ ಬಂದರೆ ನಿರ್ಲಕ್ಷ್ಯ ಬೇಡ, ಏಕೆಂದರೆ ಅದು ಹಾರ್ಟ್ ಅಟ್ಯಾಕ್!
ಎಲ್ಲಾ ತಪ್ಪಿಸಬೇಕಾದ ಆಹಾರಗಳು:
ಬೆಣ್ಣೆ, ಚೀಸ್, ಎಣ್ಣೆ ಭರಿತ ಆಹಾರ, ಬೀದಿ ಬದಿಯ ತಿಂಡಿ, ಬೇಕರಿ ತಿಂಡಿಗಳು, ಡೈರಿ ಪ್ರೋಡಕ್ಟ್, ಸಿಹಿ ತಿಂಡಿ, ಮದ್ಯಪಾನ, ಟೀ-ಕಾಫಿ (ಸಕ್ಕರೆ ಬಳಸಿರುವುದು).
ಈ ಸುಲಭದ 2-2-2 ವಿಧಾನವನ್ನು ಅನುಸರಿಸಿ ತೂಕ ಇಳಿಸಲು ನೀವು ಪ್ರಯತ್ನಿಸಿ, ಫಲಿತಾಂಶವನ್ನು ಕಂಡುಹಿಡಿಯಿರಿ.