ಎಮರ್ಜೆನ್ಸಿ: ಸಂವಿಧಾನದ ಕೈಪಿಡಿಯೊಂದಿಗೆ ಓಡಾಡುತ್ತಿರುವವರ ಕರಾಳ ಮುಖವಾಡ ಸೆ. 6 ರಂದು ಬಹಿರಂಗ
Emergency: Kangana Ranaut said on Sep 6 answer will get for those who are talking about Constitution
ಕಂಗನಾ ರಣಾವತ್ ಅವರ #ಎಮರ್ಜೆನ್ಸಿ: ಸಂವಿಧಾನದ ಬಗ್ಗೆ ಮಾತನಾಡುತ್ತಿರುವ ಸಂಸದರಿಗೆ ಸೆಪ್ಟೆಂಬರ್ 6ರಂದು ಉತ್ತರ ಸಿಗಲಿದೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ. ಆ ದಿನದಂದು ಅವರ ಬಹು ನಿರೀಕ್ಷಿತ “ಎಮರ್ಜೆನ್ಸಿ” ಚಿತ್ರ ಬಿಡುಗಡೆಗೊಳ್ಳಲಿದೆ.
ಮುಖ್ಯಾಂಶಗಳು:
- ಸೆಪ್ಟೆಂಬರ್ 6ರಂದು ಸಂವಿಧಾನದ ಬಗ್ಗೆ ಮಾತನಾಡುವವರಿಗೆ ಉತ್ತರ ಸಿಗಲಿದೆ.
- ಕಂಗನಾ ರಣಾವತ್ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
- ಕಂಗನಾ ಅಭಿನಯದ “ಎಮರ್ಜೆನ್ಸಿ” ಚಿತ್ರ ಸೆಪ್ಟೆಂಬರ್ 6ಕ್ಕೆ ಬಿಡುಗಡೆಯಾಗಲಿದೆ.
ಹೊಸದಿಲ್ಲಿ: ಸಂವಿಧಾನದ ಬಗ್ಗೆ ಮಾತನಾಡುವ ಎಲ್ಲರಿಗೂ ಸೆಪ್ಟೆಂಬರ್ 6ರಂದು ಉತ್ತರ ಸಿಗಲಿದೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ. ಅವರ ಬಹು ನಿರೀಕ್ಷಿತ “ಎಮರ್ಜೆನ್ಸಿ” ಚಿತ್ರ ಆ ದಿನ ತೆರೆ ಕಾಣಲಿದೆ.
ಇತ್ತೀಚಿನ ದಿನಗಳಲ್ಲಿ ತೆರೆಕಂಡ ಚಿತ್ರಗಳ ಪೈಕಿ, ಭಾರೀ ವಿವಾದದ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ ಎಂದು ಹೇಳಲಾಗುತ್ತಿದೆ. ತುರ್ತು ಪರಿಸ್ಥಿತಿ ಹೇರಿದ 50 ವರ್ಷಕ್ಕೆ ಕಾಲಿಡುತ್ತಿರುವ ಸಮಯದಲ್ಲಿ “ಎಮರ್ಜೆನ್ಸಿ” ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಥೆ ಸಂವಿಧಾನದ ಕರಾಳ ಸತ್ಯವನ್ನು ಹೊರಹಾಕಲಿದೆ ಎಂದು ನಿರೀಕ್ಷಿಸಲಾಗಿದೆ.
ಜೂನ್ 25, 1975 ರಿಂದ ಮಾರ್ಚ್ 21, 1977ರ ಅವಧಿಯ 21 ತಿಂಗಳಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಕಂಗನಾ ಅವರ ಬಿಡುಗಡೆಗೆ ಸಿದ್ಧವಾಗಿರುವ “ಎಮರ್ಜೆನ್ಸಿ” ಚಿತ್ರ ಈ ಕಥೆಯನ್ನು ಹೊಂದಿದೆ.
“ನನಗೆ ಮಹಾರಾಷ್ಟ್ರದ ಬಗ್ಗೆ ಹೆಮ್ಮೆಯಿದೆ, ಕಾನೂನಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಅಲ್ಲಿಗೆ ಹೋಗಬೇಕಾಯಿತು. ಇದಕ್ಕಾಗಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸೆಪ್ಟೆಂಬರ್ 6ರಂದು ನನ್ನ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಯಾಗಲಿದೆ. ಈಗಿನ ಕಾಲದ ಜನರಿಗೆ ಐವತ್ತು ವರ್ಷಗಳ ಹಿಂದೆ ನಡೆದಿದ್ದನ್ನು ತಿಳಿಯಬೇಕಾಗಿದೆ,” ಎಂದು ಕಂಗನಾ ರಣಾವತ್ ಹೇಳಿದ್ದಾರೆ.
“ಸಂವಿಧಾನದ ಅಪಹಾಸ್ಯವನ್ನು ಹೇಗೆ ಮಾಡಲಾಯಿತು, ದೇಶದ ನಾಯಕರನ್ನು ಹೇಗೆ ಬಂಧಿಸಲಾಯಿತು ಎನ್ನುವುದರ ಬಗ್ಗೆ ಚಿತ್ರದಲ್ಲಿ ವಿವರಿಸಲಾಗಿದೆ. ಈಗ ಸಂವಿಧಾನದ ಪುಸ್ತಕವನ್ನು ಹಿಡಿದು ಓಡಾಡುತ್ತಿರುವವರಿಗೆ ಈ ವಿಚಾರದಲ್ಲಿ ಗಂಭೀರತೆ ಇಲ್ಲ” ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.
“ಸಂವಿಧಾನದ ಬಗ್ಗೆ ಮಾತನಾಡುವವರು ಅದನ್ನು ತಮ್ಮ ಸ್ವತ್ತು ಎಂದುಕೊಂಡಿದ್ದಾರೆ. ದೇಶದ ಸಂವಿಧಾನವನ್ನು ಪರಿವಾರ ತಮ್ಮ ಸ್ವಾರ್ಥಕ್ಕಾಗಿ ಹೇಗೆ ಬಳಸಿಕೊಂಡಿತು ಎನ್ನುವುದಕ್ಕೆ ಚಿತ್ರ ಉತ್ತರ ನೀಡಲಿದೆ,” ಎಂದು ಕಂಗನಾ, ಪರೋಕ್ಷವಾಗಿ ಇಂದಿರಾ ಗಾಂಧಿ ಕುಟುಂಬವನ್ನು ಟೀಕಿಸಿದ್ದಾರೆ.
ಝೀ ಸ್ಟುಡಿಯೋನಿರ್ಮಿಸುತ್ತಿರುವ “ಎಮರ್ಜೆನ್ಸಿ” ಚಿತ್ರವನ್ನು ಕಂಗನಾ ರಣಾವತ್ ಖುದ್ದು ನಿರ್ದೇಶಿಸಿದ್ದಾರೆ, ಜೊತೆಗೆ ಇಂದಿರಾ ಗಾಂಧಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್, ವಾಜಪೇಯಿ ಪಾತ್ರದಲ್ಲಿ ಶ್ರೇಯಸ್ ತಲ್ಪಡೆ, ಮೊರಾರ್ಜಿ ದೇಸಾಯಿ ಪಾತ್ರದಲ್ಲಿ ಅಶೋಕ್ ಛಾಬ್ರಾ ನಟಿಸುತ್ತಿದ್ದಾರೆ.
Also Read: ಎಮರ್ಜೆನ್ಸಿ ಸಮಯದಲ್ಲಿ ಗುರುತಿಸದಂತೆ ಮುಚ್ಚುಗೆಯ ಹಾಕಿಕೊಂಡಿದ್ದ ಪ್ರಧಾನಿ ಮೋದಿ : ಚಿತ್ರಗಳು
ಈ ಚಿತ್ರ ಕಳೆದ ವರ್ಷದ ಅಕ್ಟೋಬರ್ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಬೇರೆ ಕಾರಣಗಳಿಂದ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟು ಜೂನ್ 14ಕ್ಕೆ ಎಂದಾಯಿತು. ಆದರೆ, ಕಂಗನಾಗೆ ಬಿಜೆಪಿ ಟಿಕೆಟ್ ಘೋಷಿಸಿದ ಹಿನ್ನಲೆಯಲ್ಲಿ ಮತ್ತೆ ಮುಂದೂಡಿಕೆಯಾಗಿ, ಈಗ ಸೆಪ್ಟೆಂಬರ್ 6ಕ್ಕೆ ಚಿತ್ರದ ಬಿಡುಗಡೆಗೆ ಮಹೂರ್ತ ಫಿಕ್ಸ್ ಆಗಿದೆ.