ಮಂಗಳೂರು: ಇನ್ಸ್ಟಾಗ್ರಾಂನಲ್ಲಿ ಶೇರು ಟ್ರೇಡಿಂಗ್ ಜಾಹೀರಾತು ನೋಡಿ, ಶೇರುಗಳಲ್ಲಿ ಹೂಡಿಕೆ ಮಾಡಿ 74,18,952 ರೂ. ವಂಚನೆಗೊಳಗಾದ ಪ್ರಕರಣವೊಂದು ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶೇರು ಟ್ರೇಡಿಂಗ್ ಕಥೆ ಹೀಗಿದೆ:
ಮಾ. 15ರಂದು ದೂರುದಾರರು ಇನ್ಸ್ಟಾಗ್ರಾಂನಲ್ಲಿ ಶೇರು ಟ್ರೇಡಿಂಗ್ ಬಗ್ಗೆ ಜಾಹೀರಾತು ನೋಡುತ್ತಾರೆ. ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ, ಶೇರು ಟ್ರೇಡಿಂಗ್ ಬಗ್ಗೆ ಮಾಹಿತಿಯೊಂದಿಗೆ, ಅಪರಿಚಿತ ವ್ಯಕ್ತಿಯ ವಾಟ್ಸಾಪ್ ಲಿಂಕ್ ಕೂಡ ಬರುತ್ತದೆ. ಲಿಂಕ್ನಲ್ಲಿ ಗ್ರೂಪ್ ಲಿಂಕ್ ಕಾಣಿಸುತ್ತದೆ.

ಆನ್ಲೈನ್ ತರಬೇತಿ:
ದೂರುದಾರರನ್ನು ಅಲ್ಲಿ ಸೇರಿಸಿಕೊಂಡು, ಆನ್ಲೈನ್ ಮೂಲಕ ಶೇರು ಟ್ರೇಡಿಂಗ್ ಬಗ್ಗೆ ತರಬೇತಿ ಕೊಡಲಾಗುತ್ತದೆ. ಏ. 25 ರಂದು, ಕಂಪನಿಯವರು ವಾಟ್ಸಾಪ್ ಮೂಲಕ ಟ್ರೇಡಿಂಗ್ ಖಾತೆ ತೆರೆಯಲು ಸಂದೇಶ ಕಳುಹಿಸುತ್ತಾರೆ. ಹೆಚ್ಚಿನ ಹಣ ತೊಡಗಿಸಿದರೆ ಹೆಚ್ಚು ಲಾಭಗಳಿಸಬಹುದು ಎಂದು ಪ್ರೇರೇಪಿಸುತ್ತಾರೆ.
Also Read: 17% ಭಾರತೀಯರ ಬ್ಯಾಂಕಿಂಗ್ ಪಾಸ್ವರ್ಡ್ ಅಸುರಕ್ಷಿತವಾಗಿವೆ – ಸಮೀಕ್ಷೆ
ಹೂಡಿಕೆ ಪ್ರಾರಂಭ:
ಮೊದಲಿಗೆ 10,000 ರೂ. ಹೂಡಿಕೆ ಮಾಡಲು ಸೂಚಿಸಿ, ಇಂಡಸ್ ಇಂಡ್ ಬ್ಯಾಂಕ್ ಖಾತೆ ವಿವರವನ್ನು ಕಳುಹಿಸುತ್ತಾರೆ. ದೂರುದಾರರು ಆ ಹಣವನ್ನು ಪಾವತಿಸುತ್ತಾರೆ. ನಂತರ, ಮಾ. 15 ರಿಂದ ಜು. 4ರ ತನಕ, ವಾಟ್ಸಾಪ್ ಮೂಲಕ ನಾನಾ ಬ್ಯಾಂಕ್ ಖಾತೆಗಳಿಗೆ 73,68,952 ರೂ. ಹಾಗೂ ಉಳಿದ 50,000 ರೂ. ಫೋನ್ ಪೇ ಮೂಲಕ ಪಾವತಿಸುತ್ತಾರೆ.
ವಂಚನೆ ಬೆಳಕಿಗೆ:
ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ದೂರುದಾರರು ಪ್ರಯತ್ನಿಸಿದಾಗ, ಹಣ ಹಿಂದಿರುಗದ ಕಾರಣ, ಸ್ನೇಹಿತರು ವಿಚಾರಿಸುವಾಗ ಮೋಸವೆಂಬುದು ತಿಳಿದು ಪ್ರಕರಣ ದಾಖಲಾಗುತ್ತದೆ.
ಈ ಘಟನೆ ಶೇರು ಟ್ರೇಡಿಂಗ್ನಲ್ಲಿ ಎಚ್ಚರಿಕೆ ಹಾಗೂ ಸುಳ್ಳು ಜಾಹೀರಾತುಗಳಿಗೆ ಮಾರುಹೋಗಬಾರದು ಎಂಬುದನ್ನು ಎಚ್ಚರಿಸುತ್ತದೆ.