ಅಪ್ರಾಪ್ತೆಯೊಬ್ಬಳು ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ಇನ್ನೇನು ಶಾಲಾ ಶಿಕ್ಷಣ ಮುಗಿಸಿ ಕಾಲೇಜು ಮೆಟ್ಟಲು ಹತ್ತಿರುವ ಅಪ್ರಾಪ್ತ ಬಾಲಕಿ, ಕಾಲೇಜು ಪ್ರಾಂಗಣದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಶಾಕ್ ಆಗುವಂತಹ ಘಟನೆ. ಇದು ಬೇರೆ ರಾಜ್ಯ ಅಥವಾ ದೇಶದಲ್ಲಿ ನಡೆದದ್ದಲ್ಲ, ನಮ್ಮ ಕರ್ನಾಟಕದಲ್ಲೇ ನಡೆದಿದೆ.
ಕೋಲಾರ:
ಜುಲೈ 02: ಕೋಲಾರ ಹೊರವಲಯದ ಖಾಸಗಿ ಕಾಲೇಜಿನಲ್ಲಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಷಯದಿಂದ ಕಾಲೇಜು ಉಪನ್ಯಾಸಕರು ಮತ್ತು ಸಹಪಾಠಿಗಳು ಆಘಾತಕ್ಕೊಳಗಾಗಿದ್ದಾರೆ.
ವಿದ್ಯಾರ್ಥಿನಿಗೆ ತಕ್ಷಣವೇ ಚಿಕಿತ್ಸೆ:
ಹೌದು, ವಿದ್ಯಾರ್ಥಿನಿಯನ್ನು ತಕ್ಷಣವೇ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ಮಹಿಳಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಮಗು ಕರುಣಿಸಿದ ಯುವಕನಿಗಾಗಿ ಹುಡುಕಾಟ ಕೂಡಾ ನಡೆಯುತ್ತಿದೆ.
ಪ್ರಶ್ನೆಗಳು ಮತ್ತು ಅನುಮಾನಗಳು:
ಈ ಘಟನೆಯು ಅನೇಕ ಪ್ರಶ್ನೆಗಳನ್ನೆದ್ದು ಹಾಕಿದೆ. ವಿದ್ಯಾರ್ಥಿನಿಗೆ ತಾನು ಗರ್ಭಿಣಿ ಎನ್ನುವುದು ಗೊತ್ತಿತ್ತಾ? ಮನೆಯವರು, ಪೋಷಕರು, ಈ ಬದಲಾವಣೆಯನ್ನು ಗಮನಿಸಿಲ್ಲವೇ? ಹೀಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.
ಪೊಲೀಸರ ಕ್ರಮ:
ಪ್ರಕರಣದ ದಾಖಲಾತಿಯ ನಂತರ, ಸಂತ್ರಸ್ತ ವಿದ್ಯಾರ್ಥಿನಿಯ ಮಾಹಿತಿ ಆಧರಿಸಿ, ಇದಕ್ಕೆ ಕಾರಣವಾದ ವ್ಯಕ್ತಿಯನ್ನು ಬಂಧನಕ್ಕೆ ಪಡೆಯಲಾಗಿದೆ. ಪ್ರೀತಿಯ ಹುಚ್ಚಾಟಕ್ಕೆ ಹೋಗಬಾರದು ಎಂಬುದು ಈ ಘಟನೆ ನೀಡುವ ಪಾಠವಾಗಿದೆ.
Also Read: ಹಿಜಾಬ್ ನಿಷೇಧದ ಬಳಿಕ ಇದೀಗ ಜೀನ್ಸ್ ಪ್ಯಾಂಟ್ ಮತ್ತು ಟಿ-ಶರ್ಟ್ ನಿಷೇಧಿಸಿದ ಕಾಲೇಜು
ಹಾಸ್ಟೆಲ್ನಲ್ಲಿ ಮತ್ತೊಂದು ಪ್ರಕರಣ:
2023 ಡಿಸೆಂಬರ್ನಲ್ಲಿ ಕಲಬುರಗಿಯಲ್ಲಿ, ಹಾಸ್ಟೆಲ್ನಲ್ಲೇ ಮತ್ತೊಬ್ಬ ಅಪ್ರಾಪ್ತ ಬಾಲಕಿಯು ಮಗುವಿಗೆ ಜನ್ಮ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಬಾಲಕಿಯನ್ನು ಅಮೂಲ್ಯ ಶಿಶು ಗೃಹಕ್ಕೆ ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆಯಲ್ಲಿ, ಬಾಲಕಿ ಮಗುವಿಗೆ ಜನ್ಮ ನೀಡಲು ಕಾರಣವಾದವನು ಆಕೆಯ ಸೋದರ ಸಂಬಂಧಿ ಎಂದು ತಿಳಿದು, ಆತನನ್ನು ಪೋಕ್ಸೋಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು.