ಮಮ್ಮುಟ್ಟಿಯ ಫಿಟ್ನೆಸ್ ಗುಟ್ಟು
ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಇಳಿವಯಸ್ಸಿನಲ್ಲೂ ಫಿಟ್ ಆಗಿರುವ ನಟರಲ್ಲಿ ಮಮ್ಮುಟ್ಟಿ ಮುಂಚಿನವರಲ್ಲಿ ಒಬ್ಬರು. 72 ವರ್ಷ ವಯಸ್ಸು ಇರುವ ಈ ಹಿರಿಯ ನಟ ಇನ್ನೂ ಫಿಟ್ ಮತ್ತು ಫೈನ್ ಆಗಿದ್ದಾರೆ. ದುಬೈ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಖಲೀದ್ ಆಲಿ ಅಮರಿ, ಇತ್ತೀಚೆಗೆ ಮಮ್ಮುಟ್ಟಿಯನ್ನು ಭೇಟಿಯಾಗಿ ಅವರ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ವ್ಯಾಯಾಮದ ಬಗ್ಗೆ ಚರ್ಚಿಸಿದರು.
ಮಮ್ಮುಟ್ಟಿಯ ಫಿಟ್ನೆಸ್ ದಿನಚರಿ ಹೇಗಿದೆ?
ಮಮ್ಮುಟ್ಟಿಯ ಫಿಟ್ನೆಸ್ ರಹಸ್ಯಗಳಲ್ಲಿ ಶಿಸ್ತುಬದ್ಧ ಡಯೆಟ್ ಮತ್ತು ಪೋರ್ಶನ್ ಕಂಟ್ರೋಲ್ ಮುಖ್ಯವಾಗಿದೆ. ಖಲೀದ್ ಅವರು 72 ವರ್ಷ ವಯಸ್ಸಿನಲ್ಲಿ ಫಿಟ್ ಆಗಿರುವ ಮಮ್ಮುಟ್ಟಿಯ ಫಿಟ್ನೆಸ್ ಬಗ್ಗೆ ಕೇಳಿದಾಗ, ಮಮ್ಮುಟ್ಟಿ ತಮ್ಮ ದೇಹಕ್ಕೆ ಅಗತ್ಯವಾದ ವ್ಯಾಯಾಮಗಳನ್ನು ಮಾಡುತ್ತಾರೆ, ಆದರೆ ಜಿಮ್ಗೆ ಹೋಗುವುದಿಲ್ಲ.

ಪೋರ್ಶನ್ ಕಂಟ್ರೋಲ್:
ಮಮ್ಮುಟ್ಟಿತಮ್ಮ ಇಷ್ಟದ ಎಲ್ಲಾ ಆಹಾರಗಳನ್ನು ಸೇವಿಸುತ್ತಾರೆ ಆದರೆ ಅದನ್ನು ಮಿತಿಯಲ್ಲಿ ತಿನ್ನುತ್ತಾರೆ. ಮಿತಿಯಲ್ಲಿ ಆಹಾರ ಸೇವನೆಯ ಮಂತ್ರವನ್ನು ಅವರು ಪಾಲಿಸುತ್ತಾರೆ.
ಲೈಟ್ ವರ್ಕೌಟ್:
ಮಮ್ಮುಟ್ಟಿಯ ವ್ಯಾಯಾಮದ ಬಗ್ಗೆ ಹೇಳುವಾಗ ಅವರು ಲೈಟ್ ವರ್ಕೌಟ್ಗಳನ್ನು ಮಾಡುತ್ತಾರೆ. ಊಟವಾದ ಮೇಲೆ ಸ್ವಲ್ಪ ನಡಿಗೆಗೆ ಪ್ರಾಮುಖ್ಯತೆ ನೀಡುತ್ತಾರೆ.

ಆಹಾರ ಪದ್ಧತಿ:
ಮಮ್ಮುಟ್ಟಿಯ ಫಿಟ್ನೆಸ್ ಇನ್ಸ್ಟ್ರಕ್ಟರ್ ವಿಪಿನ್ ಕ್ಸೇವಿಯರ್ ಅವರ ಮಾತಿನ ಪ್ರಕಾರ, ಮಮ್ಮುಟ್ಟಿ ಅನ್ನಕ್ಕಿಂತ ಮಿಲೆಟ್ಸ್ ಮತ್ತು ಓಟ್ಸ್ ಹೆಚ್ಚು ಸೇವಿಸುತ್ತಾರೆ. ಕಾರ್ಬೋಹೈಡ್ರೇಟ್ಸ್ಗಳಿರುವ ಆಹಾರಗಳನ್ನು ಮಿತವಾಗಿ ತಿನ್ನುತ್ತಾರೆ. ಪ್ರೊಟೀನ್ಗಾಗಿ ಮೊಟ್ಟೆ ಮತ್ತು ಮೀನು ಸೇವಿಸುತ್ತಾರೆ.
Also Read: Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಹಣೆಗೆ ಗನ್ ಇಟ್ಟಿದ್ದ ಡಾನ್ ರವಿ ಪೂಜಾರಿ?
ವೇ ಪ್ರೊಟೀನ್ ಬಳಕೆ:
ಮಮ್ಮುಟ್ಟಿಯ ಚೀಟ್ ಡೇಗಳು ಇಲ್ಲ. ಅವರು ಕಟ್ಟುನಿಟ್ಟಾಗಿ ತಮ್ಮ ಡಯೆಟ್ ಅನ್ನು ಪಾಲಿಸುತ್ತಾರೆ.
ನಿಯಮಿತ ವರ್ಕೌಟ್:
ಮಮ್ಮುಟ್ಟಿಯು ಸಮತೋಲಿತವಾಗಿ ಸಂಪೂರ್ಣ ದೇಹದ ವರ್ಕೌಟ್ಗಳನ್ನು ಅನುಸರಿಸುತ್ತಾರೆ. ಬೈಸಪ್ಟ್ ಹಾಗೂ ಟ್ರೈಸೆಪ್ಸ್ ವರ್ಕೌಟ್ಗಳನ್ನು ಮಾಡುತ್ತಾರೆ.
72ರ ಹರೆಯದಲ್ಲೂ ಮಮ್ಮುಟ್ಟಿಯು ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಶಿಸ್ತಿನ ಜೀವನ ಶೈಲಿಯನ್ನು ಅನುಸರಿಸುತ್ತಿದ್ದಾರೆ.