ಏಷ್ಯನ್ ಪೇಂಟ್ಸ್ ಹೂಡಿಕೆ : ಮೈಸೂರಿನಲ್ಲಿ ₹1,305 ಕೋಟಿ ಹೂಡಿಕೆ ಮಾಡಿದ ದೇಶದ ಅತಿ ದೊಡ್ಡ ಪೇಂಟ್ ಕಂಪನಿ
ಏಷ್ಯನ್ ಪೇಂಟ್ಸ್ ತನ್ನ ಮೈಸೂರು ಘಟಕದ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ. ಕಂಪನಿಯ ಬೇಡಿಕೆಯನ್ನು ಪೂರೈಸಲು 1,305 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 3 ಲಕ್ಷ ಕಿಲೋ ಲೀಟರ್ಗಳಿಂದ 6 ಲಕ್ಷ ಕಿಲೋ ಲೀಟರ್ಗೆ ಹೆಚ್ಚಿಸಿದೆ.
ಹೈಲೈಟ್ಸ್:
- ಮೈಸೂರು ಘಟಕದ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳಿಸಿದ ಏಷ್ಯನ್ ಪೇಂಟ್ಸ್
- ಕಂಪನಿಯ ಬೇಡಿಕೆಯನ್ನು ಪೂರೈಸಲು 1,305 ಕೋಟಿ ರೂ. ಹೂಡಿಕೆ
- ಉತ್ಪಾದನಾ ಸಾಮರ್ಥ್ಯ 3 ಲಕ್ಷ ಕಿಲೋ ಲೀಟರ್ಗಳಿಂದ 6 ಲಕ್ಷ ಕಿಲೋ ಲೀಟರ್ಗೆ ಏರಿಕೆ
ಮೈಸೂರಿನ ಉತ್ಪಾದನಾ ಘಟಕದಲ್ಲಿ 1,305 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಭಾರತದ ಅತಿ ದೊಡ್ಡ ಪೇಂಟ್ ಕಂಪನಿ ಏಷ್ಯನ್ ಪೇಂಟ್ಸ್ ಲಿಮಿಟೆಡ್ ತಿಳಿಸಿದೆ. ಈ ಹೂಡಿಕೆಯನ್ನು ಆಂತರಿಕ ಮೂಲಗಳಿಂದ ಸಂಗ್ರಹಿಸಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆದ ನಂತರ, ಮೈಸೂರು ಘಟಕದ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ. 3 ಲಕ್ಷ ಕಿಲೋ ಲೀಟರ್ನಿಂದ 6 ಲಕ್ಷ ಕಿಲೋ ಲೀಟರ್ಕ್ಕೆ ಏರಿಸಲಾಗಿದೆ.
ಸದ್ಯ 3 ಲಕ್ಷ ಕಿಲೋಲೀಟರ್ ಉತ್ಪಾದನಾ ಸಾಮರ್ಥ್ಯದಲ್ಲಿ ಶೇಕಡಾ 78ರಷ್ಟನ್ನು ಬಳಸಲಾಗುತ್ತಿದೆ ಎಂದು ಕಂಪನಿಯು ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ವಿವರಿಸಲಾಗಿದೆ.
“ಮಧ್ಯಮ ಅವಧಿಯ ಅವಶ್ಯಕತೆಗಳನ್ನು ಪೂರೈಸಲು ಮೈಸೂರು ಘಟಕದ ಸ್ಥಾಪಿತ ಸಾಮರ್ಥ್ಯವನ್ನು ವಾರ್ಷಿಕ 6 ಲಕ್ಷ ಕಿಲೋ ಲೀಟರ್ಗೆ ಹೆಚ್ಚಿಸಲಾಗಿದೆ,” ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ.
ಮಾರ್ಚ್ ತ್ರೈಮಾಸಿಕದಲ್ಲಿ 1,275 ಕೋಟಿ ರೂ. ನಿವ್ವಳ ಲಾಭ
ದೇಶದ ಮುಂಚೂಣಿ ಕಂಪನಿ ಏಷ್ಯನ್ ಪೇಂಟ್ಸ್ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 10ರಷ್ಟು ಮಾರಾಟ ಏರಿಕೆ ಕಂಡು ಬಂದಿದೆ. 8,731 ಕೋಟಿ ರೂ. ಮೌಲ್ಯದ ಮಾರಾಟವನ್ನು ದಾಖಲಿಸಿದ್ದು, 1,275 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಪೇಂಟ್ ಉದ್ಯಮದಲ್ಲಿ ಬೇಡಿಕೆ ಕಡಿಮೆಯಾಗಿದೆ. ಪ್ರೀಮಿಯಂ ವಿಭಾಗದಲ್ಲಿ ಬೇಡಿಕೆ ಕುಸಿತದಿಂದ ಆದಾಯ ಇಳಿಯುತ್ತಿದೆ. ಗ್ರಾಹಕರು ದುಬಾರಿ ಪೇಂಟ್ಗಳನ್ನು ಬಿಟ್ಟು ಕಡಿಮೆ ದರದ ಪರ್ಯಾಯಗಳತ್ತ ಮೊರೆ ಹೋಗುತ್ತಿದ್ದಾರೆ.
Also Read: ಜಾಕ್ ಮಾ (Jack Ma): ಒಂದು ಕಾಲದಲ್ಲಿ ಟಾಟಾರನ್ನೇ ಮೀರಿಸಿದ ಶ್ರೀಮಂತ ಉದ್ಯಮಿ, ಈಗ ಯಾಕೆ ಮರೆಯಾದ್ರು ಗೊತ್ತಾ?
ಆದರೆ, ಉತ್ತಮ ಮುಂಗಾರಿನ ಪರಿಣಾಮ ಬೇಡಿಕೆ ಚಿಗುರುವುದೆಂದು ಕಂಪನಿಯ ಎಂಡಿ ಮತ್ತು ಸಿಇಒ ಅಮಿತ್ ಸಿಂಗ್ಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ವರದಿ ಮಾಡುವ ವೇಳೆ ಪೇಂಟ್ ದರವನ್ನು ಶೇಕಡಾ 3.7ರಷ್ಟು ಇಳಿಸಲಾಗಿದೆ.
ಸೋಮವಾರದ ವಹಿವಾಟಿನಲ್ಲಿ ಏಷ್ಯನ್ ಪೇಂಟ್ಸ್ ಷೇರುಗಳು 6.15 ರೂ. ಅಥವಾ ಶೇಕಡಾ 0.21ರಷ್ಟು ಏರಿಕೆ ಕಂಡು 2,923.20 ರೂ. ನಲ್ಲಿ ವಹಿವಾಟು ಕೊನೆಗೊಳಿಸಿವೆ. ವರ್ಷದ ಆರಂಭದಿಂದ ಇಲ್ಲಿಯವರೆಗಿನ ಲೆಕ್ಕಕ್ಕೆ ಆಧರಿಸಿದರೆ, ಕಂಪನಿ ಷೇರುಗಳು ಶೇಕಡಾ 14ರಷ್ಟು ಕುಸಿತ ಕಂಡಿವೆ.