ಜಿಯೋ ಬಳಕೆದಾರರಿಗೆ ಬೆಲೆ ಏರಿಕೆಯ ಶಾಕ್ ಕೊಟ್ಟಿದ್ದು, ಹೊಸ ಅನಿಯಮಿತ ಯೋಜನೆಗಳ ಜೊತೆಗೆ ರೀಚಾರ್ಜ್ ದರಗಳನ್ನು ಹೆಚ್ಚಿಸಿದೆ. ಜುಲೈ 3ರಿಂದ ಈ ದರಗಳು ಜಾರಿಗೆ ಬರಲಿವೆ.
ಜಿಯೋ ನೂತನ ದರಗಳು:
ಮಾಸಿಕ, ದೈನಂದಿನ, ಮತ್ತು ವಾರ್ಷಿಕ ಯೋಜನೆಗಳಿಗೆ ದರ ಹೆಚ್ಚಳ ಅನ್ವಯವಾಗುತ್ತಿದ್ದು, ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ರಿಲಯನ್ಸ್ ಜಿಯೋ ಮತ್ತಷ್ಟು ಹೊರೆ ಆಗಿದೆ.
ಜಿಯೋ ಹೊಸ ಅಪ್ಲಿಕೇಷನ್ಗಳ ಪರಿಚಯ:
- ಜಿಯೋ ಸೇಫ್ (JioSafe): ಕ್ವಾಂಟಮ್-ಸುರಕ್ಷಿತ ಸಂವಹನ ಅಪ್ಲಿಕೇಶನ್, ಕರೆ, ಸಂದೇಶ ಕಳುಹಿಸುವಿಕೆ, ಮತ್ತು ಫೈಲ್ ವರ್ಗಾವಣೆಗೆ ಉಪಯೋಗಿಸಲಾಗುತ್ತದೆ. ಬಳಕೆದಾರರು ತಿಂಗಳಿಗೆ 199 ರೂಪಾಯಿ ಪಾವತಿಸಿ ಬಳಸಬಹುದಾಗಿದೆ.
- ಜಿಯೋ ಭಾಷಾಂತರ (JioTranslate): ಧ್ವನಿ ಕರೆಗಳು, ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು ಎಐ-ಚಾಲಿತ ಬಹು-ಭಾಷಾ ಸಂವಹನ ಅಪ್ಲಿಕೇಶನ್, ತಿಂಗಳಿಗೆ 99 ರೂಪಾಯಿ ಪಾವತಿಸಿ ಬಳಸಬಹುದು.
Also Read: ಜಾಕ್ ಮಾ (Jack Ma): ಒಂದು ಕಾಲದಲ್ಲಿ ಟಾಟಾರನ್ನೇ ಮೀರಿಸಿದ ಶ್ರೀಮಂತ ಉದ್ಯಮಿ, ಈಗ ಯಾಕೆ ಮರೆಯಾದ್ರು ಗೊತ್ತಾ?
ಜಿಯೋ ಬಳಕೆದಾರರು ಈ ಅಪ್ಲಿಕೇಶನ್ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದು.
ಆಕಾಶ್ ಎಂ ಅಂಬಾನಿ ಮಾತುಗಳು:
ರಿಲಯನ್ಸ್ ಜಿಯೋಇನ್ಫೋಕಾಮ್ ಲಿಮಿಟೆಡ್ನ ಅಧ್ಯಕ್ಷ ಆಕಾಶ್ ಎಂ ಅಂಬಾನಿ, “ಹೊಸ ಯೋಜನೆಗಳ ಪರಿಚಯವು ಉದ್ಯಮದ ಆವಿಷ್ಕಾರದತ್ತ ಒಂದು ಹೆಜ್ಜೆ ಮತ್ತು 5ಜಿ ಮತ್ತು ಎಐ ತಂತ್ರಜ್ಞಾನದಲ್ಲಿ ಹೂಡಿಕೆಯ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಡಿಜಿಟಲ್ ಇಂಡಿಯಾಗೆ ಉತ್ತಮ ಗುಣಮಟ್ಟದ, ಕೈಗೆಟುಕುವ ಇಂಟರ್ನೆಟ್ ಅತ್ಯಗತ್ಯವಾಗಿದೆ. ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ನಾವು ನಮ್ಮ ದೇಶ ಮತ್ತು ಗ್ರಾಹಕರಿಗೆ ಆದ್ಯತೆ ನೀಡುವುದನ್ನು ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ.