ಮುಟ್ಟಿನ ರಜೆ: ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಋತುಸ್ರಾವದ ರಜೆ ನೀಡುವ ಕುರಿತಂತೆ ಮಾದರಿ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತಂತೆ ಕೋರ್ಟ್ಗೆ ಮನವಿ ಸಲ್ಲಿಸಿದ ಅರ್ಜಿದಾರರು ಮತ್ತು ವಕೀಲ ಶೈಲೇಂದ್ರ ತ್ರಿಪಾಠಿ ಅವರ ಪರವಾಗಿ ವಕೀಲ ರಾಕೇಶ್ ಖನ್ನಾ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಸಂಪರ್ಕಿಸಲು ನ್ಯಾಯಪೀಠವು ಸಲಹೆ ನೀಡಿತು.
ಕೋರ್ಟ್ ನಿರ್ದೇಶನ:
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು, ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರ ಜತೆ ಸಮಾಲೋಚನೆ ನಡೆಸಿ, ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ಕುರಿತಂತೆ ಮಾದರಿ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಮಾಲೋಚನೆ:
“ನೀತಿ ನಿರೂಪಣೆ ಮಟ್ಟದಲ್ಲಿ ಈ ವಿಷಯವನ್ನು ಪರಿಶೀಲಿಸಬೇಕಾಗಿದೆ. ಸಂಬಂಧಪಟ್ಟ ಎಲ್ಲರ ಜತೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಮಾದರಿ ನೀತಿಯನ್ನು ರೂಪಿಸಬಹುದೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರದ ಕಾರ್ಯದರ್ಶಿಯನ್ನು ವಿನಂತಿಸುತ್ತೇವೆ,” ಎಂದು ಕೋರ್ಟ್ ಹೇಳಿದೆ. ರಾಜ್ಯಗಳು ಯಾವುದೇ ಕ್ರಮಗಳನ್ನು ತೆಗೆದುಕೊಂಡರೆ, ಕೇಂದ್ರದ ಸಮಾಲೋಚನಾ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Also Read: ವೈರಲ್ ವಿಡಿಯೋ: ಅಮೆರಿಕದಲ್ಲಿ ಶಾರ್ಕ್ ದಾಳಿ – ರಕ್ತದಿಂದ ಕೆಂಪಾದ ಸಮುದ್ರದ ನೀರು
ಮುತ್ತಿನ ರಜೆ ನೀಡುವ ಕಂಪನಿಗಳು:
ಭಾರತದಲ್ಲಿ ಕೆಲವು ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡುವ ಕುರಿತಂತೆ ಮುಂದಾಗಿವೆ. ಕೆಲವು ಪ್ರಮುಖ ಕಂಪನಿಗಳು:
- ಜೊಮ್ಯಾಟೊ: ವಾರ್ಷಿಕವಾಗಿ 10 ದಿನಗಳವರೆಗೆ ವೇತನ ಸಹಿತ ಮುಟ್ಟಿನ ರಜೆ.
- ಬೈಜೂಸ್: ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಒದಗಿಸುತ್ತದೆ.
- ಸ್ವಿಗ್ಗಿ: ಇತ್ತೀಚೆಗೆ ಇದೇ ರೀತಿಯ ನೀತಿಯನ್ನು ಪರಿಚಯಿಸಿದೆ.
- ಮ್ಯಾಗ್ಸ್ಟರ್: ಡಿಜಿಟಲ್ ನಿಯತಕಾಲಿಕ ವೇದಿಕೆ, ವೇತನ ಸಹಿತ ರಜೆ.
- ಓರಿಯಂಟ್ ಎಲೆಕ್ಟ್ರಿಕ್: ಸಂಬಳ ಸಮೇತ ಮುಟ್ಟಿನ ರಜೆ.
- ಕಲ್ಚರ್ ಮೆಷಿನ್: ಋತುಚಕ್ರದ ಮೊದಲ ದಿನದಂದು ಒಂದು ದಿನ ರಜೆ.
- ಗೋಜೂಪ್ ಆನ್ಲೈನ್ ಪ್ರೈವೇಟ್ ಲಿಮಿಟೆಡ್: ಮುಟ್ಟಿನ ಮೊದಲ ದಿನದಂದು ವೇತನ ಸಹಿತ ರಜೆ ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆ.
- ಐವಿಪನನ್: ವರ್ಷಕ್ಕೆ 12 ದಿನಗಳ ಮುಟ್ಟಿನ ರಜೆ.
- ಇಂಡಸ್ಟ್ರಿಎಆರ್ ಸಿ: ಒಂದು ಅಥವಾ ಎರಡು ದಿನ ರಜೆ, ನಂತರ ಸರಿದೂಗಿಸುವ ವ್ಯವಸ್ಥೆ.
Supreme Court disposes of a PIL seeking menstrual leave for woman employees and asks the Centre to hold talks with all stakeholders and State governments to decide if a model policy can be framed in this regard.
Supreme Court observes that menstrual leaves may encourage women… pic.twitter.com/PgD43PlqZr
— The Times Of India (@timesofindia) July 8, 2024
ಪ್ರಸ್ತುತ: ಬಿಹಾರ ಮತ್ತು ಕೇರಳ ದೇಶದಲ್ಲಿ ಋತುಚಕ್ರದ ರಜೆಗೆ ಅವಕಾಶವಿರುವ ಎರಡು ರಾಜ್ಯಗಳಾಗಿವೆ. ಬಿಹಾರವು ಮಹಿಳಾ ಉದ್ಯೋಗಿಗಳಿಗೆ ಎರಡು ದಿನಗಳ ರಜೆ ನೀಡುವುದಾದರೆ, ಕೇರಳದಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಜೆಗೆ ಅವಕಾಶವಿದೆ.