ಶೀರ್ಷಿಕೆ:
- ಮುಂಬೈನಲ್ಲಿ ಹೃದಯವಿದ್ರಾವಕ ಘಟನೆ: ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗ.
- ಆತ್ಮಹತ್ಯೆ ಶಾಕ್: ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ ವೈರಲ್.
ಮುಂಬೈ: ತನ್ನ ಸಮಸ್ಯೆಗಳಿಗೆ ಆತ್ಮಹತ್ಯೆ ಒಡೆಯ ಪರಿಹಾರವೆಂದು ತಂದುಕೊಂಡು ಅದೆಷ್ಟೋ ಜನರು ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಂತಹದೇ ಆಘಾತಕಾರಿ ಘಟನೆಯೊಂದು ಮುಂಬೈನ ಪಾಲ್ಘರ್ಜಿಲ್ಲೆಯಲ್ಲಿ ನಡೆದಿದ್ದು, ನಮ್ಮ ಸಮಸ್ಯೆಗೆ ಸಾವು ಒಂದೇ ಪರಿಹಾರವೆಂದು ತಂದೆ-ಮಗ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಸಹ್ಯಕರ ದೃಶ್ಯ:
ಮನುಷ್ಯನಿಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಎಂದೂ ಪರಿಹಾರವಲ್ಲ. ಜೀವನದಲ್ಲಿ ಬರುವ ಕಷ್ಟಗಳನ್ನು ದೃಢವಾಗಿ ಎದುರಿಸಿ ನಿಂತರೆ, ಯಾವುದೇ ಕಠಿಣ ಪರಿಸ್ಥಿತಿಯಿಂದಲೂ ಹೊರಬರಬಹುದು. ಆದರೆ, ಮಾನಸಿಕ ಹಿಂಸೆ ಅಥವಾ ಇತರ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವವನ್ನೇ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಆತ್ಮಹತ್ಯೆ:
ಮುಂಬೈನ ಪಾಲ್ಘರ್ ಜಿಲ್ಲೆಯ ಭಾಯಂದರ್ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ನಂ. 6 ರ ಮುಂಭಾಗದಲ್ಲಿ ಈ ಘಟನೆ ಜುಲೈ 09 ರಂದು ನಡೆದಿದ್ದು, ರೈಲು ಬರುತ್ತಿದ್ದಂತೆ ತಂದೆ-ಮಗ ಇಬ್ಬರು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Also Read: ವಿಡಿಯೋ ವೈರಲ್: ಹಾಸ್ಟೆಲ್ನಲ್ಲಿ ನೀಡಿದ ಚಟ್ನಿಯಲ್ಲಿ ಈಜಾಡಿದ ಇಲಿ!
ಮೃತರ ವಿವರ:
ವರದಿಗಳ ಪ್ರಕಾರ, ವಸಾಯಿಯ ನಿವಾಸಿಗಳಾದ ತಂದೆ ಹರೀಶ್ ಮೆಹ್ತಾ (60) ಮತ್ತು ಮಗ ಜೈ ಮೆಹ್ತಾ (30) ವಿರಾರ್ನಿಂದ ಚರ್ಚ್ಗೇಟ್ಗೆ ಹೋಗುತ್ತಿದ್ದ ಲೋಕಲ್ ಟ್ರೈನ್ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆತ್ಮಹತ್ಯೆಯ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
भाईंदर रेल्वे स्थानकाजवळ पिता पुत्राने धावत्या लोकल ट्रेनखाली उडी मारून आत्महत्या गेली. सोमवारी सकाळी साडेअकराच्या सुमारास ही घटना घडली. हरिष मेहता (६०) आणि जय मेहता (३०) अशी त्यांची नावे आहेत. त्यांनी आत्महत्या का केली याचा तपास वसई रेल्वे पोलीस करत आहेत. pic.twitter.com/kzXtPPWbHa
— LoksattaLive (@LoksattaLive) July 9, 2024
ಭೀಕರ ದೃಶ್ಯದ ವಿವರಣೆ:
LoksattaLive ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೈರಲ್ ವಿಡಿಯೋದಲ್ಲಿ, ರೈಲ್ವೆ ಫ್ಲಾಟ್ಫಾರ್ಮ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ತಂದೆ-ಮಗ ಸೀದಾ ರೈಲ್ವೆ ಹಳಿಗೆ ಜಿಗಿದು, ಆ ಕಡೆ ಬರುವ ರೈಲು ನೋಡುತ್ತ, ಕೈ ಕೈ ಹಿಡಿದುಕೊಂಡು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯವನ್ನು ಕಾಣಬಹುದು.
ಸಾರಾಂಶ:
ಆತ್ಮಹತ್ಯೆ ಎಂದೂ ಪರಿಹಾರವಲ್ಲ. ಬದುಕಿನ ಕಷ್ಟಗಳನ್ನು ಎದುರಿಸಲು ತಾಳ್ಮೆ ಮತ್ತು ಧೈರ್ಯ ಬೇಕು. ಆತ್ಮಹತ್ಯೆ ತಡೆಯಲು ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಒಳ್ಳೆಯ ನೆರವು ಅಗತ್ಯವಿದೆ.