ಆಗ್ರಾ: ಗಂಡನೊಂದಿಗೆ ಮನಸ್ತಾಪ ಉಂಟಾಗಿ ಮಹಿಳೆಯೊಬ್ಬಳು ಪತಿಗೆ ವಿಚಿತ್ರ ಬೇಡಿಕೆಯನ್ನು ಇಟ್ಟಿದ್ದಾಳೆ. ಗಂಡನಿಂದ ದೂರ ಹೋಗಲು ಬಯಸಿದ ಆಕೆ, ತನ್ನ ಬಾಯ್ಫ್ರೆಂಡ್ ಜೊತೆ ಇರಲು ಬೇಕಾದ ಸಂಪೂರ್ಣ ಖರ್ಚನ್ನು ಗಂಡನೇ ಭರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಈ ಬೇಡಿಕೆ ಕೇಳಿ ಗಂಡನಿಗೆ ಶಾಕ್ ಹೊಡೆದಂತಾಗಿದೆ.
ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಗಂಡನೊಂದಿಗೆ ಕುಟುಂಬ ಕೌನ್ಸಿಲಿಂಗ್ ಸೆಂಟರ್ಗೆ ಹೋಗಿದ್ದಾಗ, ಆಕೆ “ನಾನು ನನ್ನ ಬಾಯ್ಫ್ರೆಂಡ್ ಜೊತೆಗೆ ಬದುಕಲು ಬಯಸುತ್ತೇನೆ. ಆದರೆ, ನನ್ನ ಮತ್ತು ಪ್ರಿಯಕರನ ಖರ್ಚನ್ನು ನನ್ನ ಗಂಡನೇ ಭರಿಸಬೇಕು” ಎಂದು ಕೇಳಿದ್ದಾಳೆ.

ಈ ವಿಚಿತ್ರ ಬೇಡಿಕೆಯನ್ನು ಕೇಳಿ ಗಂಡ ಅಚ್ಚರಿ ಪಟ್ಟು, “ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ವಾಸಿಸುತ್ತಿರುವಾಗ ನಾನೇಕೆ ಅವಳ ಖರ್ಚನ್ನು ಸಹ ಭರಿಸಬೇಕು?” ಎಂದು ಪ್ರಶ್ನಿಸಿದ್ದಾನೆ.
Also Read: ಬಾಯ್ಫ್ರೆಂಡ್ನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್ ಹಾಕಿದ ಗೆಳತಿ, ಕಾರಣ ಕೇಳಿ ಪೊಲೀಸರೇ ಶಾಕ್!
ಮಹಿಳೆ ತನ್ನ ಗಂಡನೊಂದಿಗೆ ವಾಸಿಸಲು ಇಚ್ಛೆ ಇಲ್ಲದ ಕಾರಣ, ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಪ್ರಿಯಕರನ ಮನೆಗೆ ಹೋಗಲು ನಿರ್ಧರಿಸಿದ್ದಾಳೆ. ಆದರೆ, ಅವರೆಲ್ಲರ ಖರ್ಚನ್ನು ಗಂಡನೇ ಹೊಣೆಹೊತ್ತುಕೊಳ್ಳಬೇಕೆಂದು ಆಕೆ ಒತ್ತಾಯಿಸುತ್ತಿದ್ದಾಳೆ.

ಆಕೆ ತನ್ನ ಪ್ರಿಯಕರನೊಂದಿಗೆ ವಾಸಿಸಿದರೆ, ಆಕೆಗೆ ಒಂದು ರೂಪಾಯಿ ಕೂಡ ಕೊಡಬಾರದು ಎಂದು ಗಂಡನೂ ತೀರ್ಮಾನಿಸಿದ್ದಾನೆ.
ಆಪ್ತಸಮಾಲೋಚಕ ಡಾ. ಅಮಿತ್ ಮಾತನಾಡಿ, “ಇಬ್ಬರಿಗೂ ಮದುವೆಯಾಗಿ 10 ವರ್ಷಗಳಾಗಿವೆ. ಪತ್ನಿ ಹತ್ರಾಸ್ ನಿವಾಸಿ, ಪತಿ ಆಗ್ರಾ ನಿವಾಸಿ. ಪತ್ನಿ ತನ್ನ ಪ್ರಿಯಕರನೊಂದಿಗೆ ವಾಸಿಸಲು ಬಯಸುತ್ತಾಳೆ, ಆದರೆ ಪತಿಯ ಮೊತ್ತಕ್ಕೂ ಮಾಸಿಕ ಖರ್ಚು ಕೇಳುತ್ತಿದ್ದಾರೆ. ಪತಿ ಇದಕ್ಕೆ ಒಪ್ಪುವುದಿಲ್ಲ. ಸದ್ಯ, ಮತ್ತೊಂದು ದಿನಾಂಕ ನಿಗದಿಪಡಿಸಲಾಗಿದೆ. ಮುಂದಿನ ನಿರ್ಧಾರ ಏನೆಂದು ಕಾದು ನೋಡಬೇಕಿದೆ” ಎಂದು ತಿಳಿಸಿದ್ದಾರೆ.