ಕರ್ನಾಟಕ ಎಸ್‌ಎಸ್‌ಎಲ್‌ಸಿ 2025 ಫಲಿತಾಂಶ ಲೈವ್: 2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು ಬಿಡುಗಡೆಯಾಗಲಿದೆ. ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದ ಪರೀಕ್ಷೆಯಲ್ಲಿ 8,96,447 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯದ 15,881 ಶಾಲೆಗಳಿಂದ ಬಂದ ವಿದ್ಯಾರ್ಥಿಗಳು 2,818 ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಿದ್ದರು. ಫಲಿತಾಂಶದ ಇತ್ತೀಚಿನ ವಿವರಗಳು ಇಲ್ಲಿವೆ.
Karnataka SSLC Results 2025 LIVE: ಉರ್ದು ಪ್ರೌಢ ಶಾಲೆಯ ವಿಧ್ಯಾರ್ಥಿನಿ ಟಾಪರ್!
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ SSLC ವಿಧ್ಯಾರ್ಥಿನಿಯ ಸಾಧನೆ
625ಕ್ಕೆ 625ಅಂಕ ಗಳಿಸಿದ ವಿದ್ಯಾರ್ಥಿನಿ
ಶಗುಪ್ತಾ ಅಂಜುಮ್ ಸಾಧನೆ ಮಾಡಿದ ವಿಧ್ಯಾರ್ಥಿನಿ
ಉರ್ದು ಪ್ರೌಢ ಶಾಲೆಯ ವಿಧ್ಯಾರ್ಥಿನಿ
ಉತ್ತರ ಕನ್ನಡ ಜಿಲೆಯ ಶಿರಸಿ ಶೈಕ್ಷಣಿಕ ಜಿಲ್ಲೆ
Karnataka SSLC Results 2025 LIVE: ಮತ್ತೆ ಹಿಂದೆ ಬಿದ್ದ ವಿದ್ಯಾಕಾಶಿ ಧಾರವಾಡ!
ಮತ್ತೆ ಫಲಿತಾಂಶದಲ್ಲಿ ಹಿಂದೆ ಬಿದ್ದ ವಿದ್ಯಾಕಾಶಿ ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಮಿಶನ್ ವಿದ್ಯಾಕಾಶಿ ಎಂಬ ವಿಶೇಷ ಕಾರ್ಯಕ್ರಮ
ಕಳೆದ ಒಂದು ವರ್ಷದಿಂದ ವಿಶೇಷ ತರಗತಿ ಆರಂಭಿಸಿದ್ದ ಜಿಲ್ಲಾಡಳಿತ
2024ರ ಫಲಿತಾಂಶದಲ್ಲಿ 22ನೇ ರ‍್ಯಾಂಕ್ ಪಡೆದಿದ್ದ ಜಿಲ್ಲೆ
ಈ ಹಿನ್ನೆಲೆ ಮಿಶನ್ ವಿದ್ಯಾಕಾಶಿ ಕಾರ್ಯಕ್ರಮ ಆಯೋಜಿಸಿದ್ದ ಜಿಲ್ಲಾಡಳಿತ
ಸದ್ಯ ಕೇವಲ 4 ಸ್ಥಾನಗಳಲ್ಲಿ ಜಿಗಿತ ಕಂಡಿರುವ ಫಲಿತಾಂಶ
22 ರಿಂದ 18ನೇ ರ‍್ಯಾಂಕ್ ಪಡೆದಿರುವ ಧಾರವಾಡ
Karnataka SSLC Results 2025 LIVE: ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಎಷ್ಟು?
625 ಅಂಕಗಳನ್ನು ಪಡೆದ ಫಸ್ಟ್ ರ‍್ಯಾಂಕ್ ವಿದ್ಯಾರ್ಥಿಗಳು – 22
624 ಅಂಕಗಳನ್ನು ಪಡೆದ ಸೆಕೆಂಡ್ ರ‍್ಯಾಂಕ್ ವಿದ್ಯಾರ್ಥಿಗಳು – 65
623 ಅಂಕಗಳನ್ನು ಪಡೆದ ಮೂರನೇ ರ‍್ಯಾಂಕ್ ವಿದ್ಯಾರ್ಥಿಗಳು – 108
622 ಅಂಕಗಳನ್ನು ಪಡೆದ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿಗಳು – 189
621 ಅಂಕಗಳನ್ನು ಪಡೆದ ಐದನೇ ಸ್ಥಾನ ಪಡೆದ ವಿದ್ಯಾರ್ಥಿಗಳು – 289
SSLC Result 2025 Live: ಸರ್ಕಾರಿ ಶಾಲೆಗಳಿಗೆ ಶೇ 62.7 ಫಲಿತಾಂಶ
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಶೇಕಡಾ 62.7ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳಲ್ಲಿ ಶೇಕಡಾ 58.97ರಷ್ಟು ಮಕ್ಕಳು ಉತ್ತೀರ್ಣರಾಗಿದ್ದರೆ, ಅನುದಾನರಹಿತ ಶಾಲೆಗಳಲ್ಲಿ ಶೇ 75.59ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
Karnataka SSLC Results 2025 LIVE: 22 ಟಾಪರ್ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು
1. ಅಖಿಲ್ ಅಹ್ಮದ್ ನದಾಫ್ – ವಿಯಪುರ
2. ಭಾವನಾ – ಬೆಂಗಳೂರು ಗ್ರಾಮಾಂತರ
3. ಧನಲಕ್ಷ್ಮಿ ಎಂ – ಬೆಂಗಳೂರು ಉತ್ತರ
4. ಧನುಷ್ – ಮೈಸೂರು
5. ಧೃತಿ – ಮಂಡ್ಯ
6. ಜಾಹ್ನವಿ – ಬೆಂಗಳೂರು ದಕ್ಷಿಣ
7. ಮಧುಸೂದನ್ ರಾಜು – ಬೆಂಗಳೂರು ಉತ್ತರ
8. ಮೊಹಮ್ಮದ್ ಮಸ್ತೂರ್ ಆದಿಲ್ – ತುಮಕೂರು
9. ಮೌಲ್ಯ ಡಿ ರಾಜ್ – ಚಿತ್ರದುರ್ಗ
10. ನಮನ – ಶಿವಮೊಗ್ಗ
11. ನಮಿತಾ – ಬೆಂಗಳೂರು ದಕ್ಷಿಣ
12. ನಂದನ್ – ಚಿತ್ರದುರ್ಗ
13. ನಿತ್ಯಾ ಎಂ ಕುಲಕರ್ಣಿ – ಶಿವಮೊಗ್ಗ
14. ರಂಜಿತಾ – ಬೆಂಗಳೂರು ಗ್ರಾಮಾಂತರ
15. ರೂಪ ಚನ್ನಗೌಡ ಪಾಟೀಲ್ – ಬೆಳಗಾವಿ
16. ಶಹಿಷ್ಣು – ಶಿವಮೊಗ್ಗ
17. ಶಗುಫ್ತಾ ಅಂಜುಮ್ – ಸಿರಸಿ
18. ಸ್ವಸ್ತಿ ಕಾಮತ್ – ಉಡುಪಿ
19. ತನ್ಯಾ – ಮೈಸೂರು
20. ಉತ್ಸವ್ ಪಾಟೀಲ್ – ಹಾಸನ
21. ಯಶವಂತ್ ರೆಡ್ಡಿ – ಮಧುಗಿರಿ
22. ಯುಕ್ತಿ – ಬೆಂಗಳೂರು ದಕ್ಷಿಣ
Karnataka SSLC Results 2025 LIVE: ಬೈಲಹೊಂಗಲದ ವಿದ್ಯಾರ್ಥಿನಿ ಟಾಪರ್
ರಾಜ್ಯಕ್ಕೆ ಪ್ರಥಮ ಬಂದ ಬೆಳಗಾವಿ ವಿದ್ಯಾರ್ಥಿನಿ.
ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ವಿದ್ಯಾರ್ಥಿನಿ 625 ಮಾಕ್ಸ್.
ರೂಪಾ ಚನ್ನಗೌಡ ಪಾಟೀಲ್
ರಾಜ್ಯಕ್ಕೆ ಪ್ರಥಮ ಬಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ.
ಕುಟುಂಬಸ್ಥರಲ್ಲಿ ಸಂತೋಷ
Karnataka SSLC Results 2025 LIVE: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಫಲಿತಾಂಶ ಯಾವ ಸೈಟ್ ಗಳಲ್ಲಿ ಲಭ್ಯ? ಇಲ್ಲಿದೆ ಮಾಹಿತಿ
ಎಸ್ ಎಸ್ ಎಲ್ ಸಿ ಫಲಿತಾಂಶ ಯಾವ ಸೈಟ್ ಗಳಲ್ಲಿ ಲಭ್ಯ
ಬಹುನಿರೀಕ್ಷೆಯಿಂದ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಕಾಯುವಿಕೆಗೆ ಇಂದು ತೆರೆ ಬೀಳಲಿದೆ. ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) SSLC ಅಥವಾ 10 ನೇ ತರಗತಿಯ ಬೋರ್ಡ್ ಪರೀಕ್ಷಾ ಫಲಿತಾಂಶವು ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಗೊಳ್ಳಲಿದೆ. ಹೀಗಾಗಿ ವಿದ್ಯಾರ್ಥಿಗಳು kseab.karnataka.gov.in ಅಥವಾ karresults.nic.in/ಹಾಗೂ sslc.karnataka.gov.in ಈ ಮೂರು ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.

Karnataka SSLC Results 2025 LIVE: ಕಾರ್ಕಳದ ವಿದ್ಯಾರ್ಥಿನಿ ಟಾಪರ್
ಉಡುಪಿ ಜಿಲ್ಲೆಯ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಟಾಪರ್
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಥಮ ಸ್ಥಾನ
625 ರಲ್ಲಿ 625 ಅಂಕ ಪಡೆದ ಸರಸ್ವತಿ ಕಾಮತ್
Karnataka SSLC Results 2025 LIVE: ವಿಜಯಪುರದ ಬಾಲಕ ಟಾಪರ್
SSLCಯಲ್ಲಿ ವಿಜಯಪುರ ಖಾಸಗಿ ಶಾಲೆಯ ಬಾಲಕ ಟಾಪರ್
625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿ
ಅಕೀಲ್ ಅಹ್ಮದ್ ನದಾಫ್ ಟಾಫರ್
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸಪರ್ಡ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ
Karnataka SSLC Results 2025 LIVE: 2-3 ಪರೀಕ್ಷೆಯ ದಿನಾಂಕ ಪ್ರಕಟ
SSLC ಪರೀಕ್ಷೆ 2 ದಿನಾಂಕ ಘೋಷಣೆ
ಮೇ 26 ರಿಂದ ಜೂನ್ 2 ವೆರೆಗೆ ಪರೀಕ್ಷೆ 2
ಮರು ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ
ಜೂನ್ 23 ರಿಂದ ಜೂನ್ 30ರ ವರೆಗೆ ಪರೀಕ್ಷೆ 3 ನಡೆಯಲಿದೆ
ಶಿಕ್ಷಣ ಸಚಿವ ಮಧುಬಂಗಾರಪ್ಪ ಘೋಷಣೆ
SSLC Result 2025 Live: 327 ವಿದ್ಯಾರ್ಥಿಗಳಿಗೆ 620ಕ್ಕೂ ಹೆಚ್ಚು ಅಂಕ
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 62.34% ಫಲಿತಾಂಶ ಬಂದಿದೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಕಳೆದ ಬಾರಿ ಒಬ್ಬರು ಮಾತ್ರ ಗರಿಷ್ಠ ಅಂಕ ಪಡೆದಿದ್ದರು. ಈ ಬಾರಿ 327 ಮಕ್ಕಳು 620ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
Karnataka SSLC Results 2025 LIVE: ಹೀಗಿದೆ ಶೇಕಡಾವಾರು ಫಲಿತಾಂಶ
ಒಟ್ಟಾರೆ ಹಾಜರಾದ ವಿದ್ಯಾರ್ಥಿಗಳು 842173
ಉತ್ತೀರ್ಣರಾದವರು: 524984
ಶೇಕಡವಾರು ಫಲಿತಾಂಶ: 62%
ಫೇಲ್ ಆದವರು: 3,17,189
SSLC Result 2025 Live: ಎಸ್‌ಎಸ್‌ಎಲ್‌ಸಿ ಫಲಿತಾಂಶ ಘೋಷಣೆ: 22 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!
2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು, ಶೇ.62.14ರಷ್ಟು ಫಲಿತಾಂಶ ದಾಖಲಾಗಿದೆ. ಬಾಲಕರಿಗಿಂತ ಬಾಲಕಿಯರು ಈ ಬಾರಿಯೂ ಹೆಚ್ಚಿನ ಪ್ರತಿಶತವನ್ನು ಗಳಿಸಿದ್ದಾರೆ. ವಿಶೇಷವಾಗಿ, 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳೊಂದಿಗೆ ಟಾಪರ್ ಆಗಿದ್ದಾರೆ.
Karnataka SSLC Results 2025 LIVE: ಎಂದಿನಂತೆ ಹೆಣ್ಣುಮಕ್ಕಳದ್ದೇ ಮೇಲುಗೈ
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಬಾರಿಯೂ ಹೆಣ್ಣುಮಕ್ಕಳದ್ದೇ ಮೇಲುಗೈ
ಹೆಣ್ಣುಮಕ್ಕಳು-74.00%
ಗಂಡು ಮಕ್ಕಳು- -58.07%

Karnataka SSLC Results 2025 LIVE: ಟಾಪ್ 5 ವಿದ್ಯಾರ್ಥಿಗಳು ಇವರೇ
1. ಅಖಿಲ್ ಅಹಮ್ಮದ್ ನದಾಫ್ – ವಿಜಯಪುರ – ಆಕ್ಸ್ ಫರ್ಡ್ ಹೈ ಸ್ಕೂಲ್ ನಗರಬೆಟ್ಟ, ಮುದ್ದೇಬಿಹಾಳ – 625
2. ಸಿ ಭಾವನ – ಬೆಂಗಳೂರು ಗ್ರಾಮಾಂತರ – ನೀಲಗಿರಿಶ್ವೇರ ವಿದ್ಯಾನಿಕೇತನ ಸ್ಕೂಲ್ ದೇವನಹಳ್ಳಿ – 625
3. ಧನಲಕ್ಷ್ಮಿ – ಬೆಂಗಳೂರು ಉತ್ತರ – ಸೈಂಟ್ ಯಾಶ್ ಪಬ್ಲಿಕ್ ಸ್ಕೂಲ್ ಕೆಂಪೇಗೌಡ ನಗರ ಮಾಗಡಿ ರಸ್ತೆ – 625
4. ಧನುಷ್ – ಮೈಸೂರು – ಮರಿಮಲ್ಲಪ್ಪ ಹೈ ಸ್ಕೂಲ್ ಮೈಸೂರು – 625
5. ಧೃತಿ ಜೆ – ಮಂಡ್ಯ – ಸಾಹುಕಾರ ಎಸ್ ಕೆ ಚಿಕ್ಕಣ್ಣಗೌಡ ಇಂಗ್ಲಿಷ್ ಹೈ ಸ್ಕೂಲ್ ಕೆಆರ್ ಪೇಟೆ – 625
SSLC Result 2025 Live: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕರಾವಳಿ, ಮಲೆನಾಡು ಜಿಲ್ಲೆಗಳ ದರ್ಬಾರ್
2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಬಿಡುಗಡೆಯಾಗಿದೆ. ದಕ್ಷಿಣ ಕನ್ನಡ (ಶೇ.91.12), ಉಡುಪಿ (ಶೇ.89.96), ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳು ಮೊದಲ ನಾಲ್ಕು ಸ್ಥಾನಗಳನ್ನು ಗಳಿಸಿವೆ.
Karnataka SSLC Results 2025 LIVE: ಟಾಪ್ 5 ಜಿಲ್ಲೆಗಳ ಫಲಿತಾಂಶ
ಟಾಪ್ 5 ಜಿಲ್ಲೆಗಳ ಫಲಿತಾಂಶ
ದಕ್ಷಿಣ ಕನ್ನಡ – 91.12%
ಉಡುಪಿ – 89.96%
ಉತ್ತರ ಕನ್ನಡ – 83.19%
ಶಿವಮೊಗ್ಗ – 82.29%
ಕೊಡಗು – 82.21%
Karnataka SSLC Results 2025 LIVE: ಶೇ.66.14ರಷ್ಟು ಫಲಿತಾಂಶ ಘೋಷಣೆ
2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಈ ಬಾರಿ ಒಟ್ಟು ಶೇ.66.14ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
Karnataka SSLC Results 2025 LIVE: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ!
2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಘೋಷಣೆಯಾಗಿದೆ. ಈ ಬಾರಿ ಶೇ.66.14ರಷ್ಟು ಫಲಿತಾಂಶ ದಾಖಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಗಳಿಸಿದೆ. ಉಡುಪಿ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದರೆ, ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
SSLC Result 2025 Live: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆರಂಭ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ಶುರುವಾಗಿದ್ದು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುತ್ತಿದೆ.
SSLC Result 2025 Live: 8.96 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಕೆಲವೇ ಕ್ಷಣಗಳಲ್ಲಿ!
8.96 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ. ಈ ವರ್ಷ 4,61,563 ಹುಡುಗರು ಮತ್ತು 4,34,884 ಹುಡುಗಿಯರು ಪರೀಕ್ಷೆಗೆ ಹಾಜರಾಗಿದ್ದರು.
SSLC Result 2025 Live: 240 ಕೇಂದ್ರಗಳಲ್ಲಿ ನಡೆದಿದ್ದ ಮೌಲ್ಯಮಾಪನ
ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನವನ್ನು 240 ಕೇಂದ್ರಗಳಲ್ಲಿ 65,000 ಮೌಲ್ಯಮಾಪಕರು ನಿರ್ವಹಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
SSLC Result 2025 Live: ಮಧು ಬಂಗಾರಪ್ಪರಿಂದ ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಘೋಷಣೆ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಇನ್ನೇನು ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಬಳಿಕ, ಮಧ್ಯಾಹ್ನ 12:30ರ ನಂತರ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದು.
SSLC Result 2025 Live: ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?
ವಿದ್ಯಾರ್ಥಿಗಳು ಫಲಿತಾಂಶಗಳನ್ನು 12.30 ರ ನಂತರ kseab.karnataka.gov.in ಅಥವಾ karresults.nic.in ನಲ್ಲಿ ಪರಿಶೀಲಿಸಬಹುದು.
ಕರ್ನಾಟಕ ಎಸ್‌ಎಸ್‌ಎಲ್‌ಸಿ 2025 ಫಲಿತಾಂಶ ಲೈವ್:
2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದ ಪರೀಕ್ಷೆಯಲ್ಲಿ 8,96,447 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯದ 15,881 ಶಾಲೆಗಳ ವಿದ್ಯಾರ್ಥಿಗಳು 2,818 ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಿದ್ದರು. ಫಲಿತಾಂಶದ ತಾಜಾ ಅಪ್‌ಡೇಟ್‌ಗಳು ಇಲ್ಲಿವೆ.
SSLC Result 2025 Live: ಆನ್‌ಲೈನ್‌ನಲ್ಲಿ ಫಲಿತಾಂಶ ಪರಿಶೀಲನೆಗೆ ಬೇಕಾದ ದಾಖಲೆಗಳೇನು?
ಎಸ್‌ಎಸ್‌ಎಲ್‌ಸಿ ಫಲಿತಾಂಶ ಆನ್‌ಲೈನ್‌ನಲ್ಲಿ ಬಿಡುಗಡೆಯಾದ ಬಳಿಕ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಅಂಕಪಟ್ಟಿಯನ್ನು ವೀಕ್ಷಿಸಬಹುದು.
Karnataka KSEAB Class 10 SSLC Results 2025 LIVE:
ಬೆಂಗಳೂರು, ಮೇ 2: 2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು ಘೋಷಿಸಲಿದೆ. ಫಲಿತಾಂಶಕ್ಕಾಗಿ ಕಾತುರದ ಕ್ಷಣಗಣನೆ ಶುರುವಾಗಿದೆ. ಬೆಳಿಗ್ಗೆ 11:30ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12:30ರ ಬಳಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಪರಿಶೀಲಿಸಬಹುದು. ದ್ವಿತೀಯ ಪಿಯುಸಿಯಂತೆ, ಈ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಎರಡು ಹೆಚ್ಚುವರಿ ಪರೀಕ್ಷೆಯ ಅವಕಾಶವಿದೆ. ಉತ್ತೀರ್ಣರಾಗದವರು ಅಥವಾ ಉತ್ತಮ ಅಂಕ ಪಡೆಯದವರು ಎರಡು ಬಾರಿ ಪರೀಕ್ಷೆಯನ್ನು ಪುನರಾವರ್ತಿಸಬಹುದು. ಎಸ್‌ಎಸ್‌ಎಲ್‌ಸಿ ಫಲಿತಾಂಶದ ತಾಜಾ ವಿವರಗಳು ಇಲ್ಲಿ ಲಭ್ಯವಿವೆ.