ವೈರಲ್ ವಿಡಿಯೋ : ಬಸ್ನಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಕೈ ತುಂಡಾದ ಘಟನೆ ವೈರಲ್ ಆಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಘಟನೆ ವಿವರಗಳು:
ಪ್ರಯಾಣದ ವೇಳೆ, ಬಸ್ನಲ್ಲಿ ಇರುವ ಪ್ರಯಾಣಿಕರು ಕೆಲವು ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವುದನ್ನು ಮರೆಯುತ್ತಾರೆ. ಬಸ್ನಲ್ಲಿ ಕಿಟಕಿಯ ಹೊರಗೆ ಕೈ ಅಥವಾ ತಲೆ ಹಾಕಬಾರದು ಎಂಬ ಸೂಚನಾ ಫಲಕಗಳನ್ನು ಅನೇಕರು ಕಡೆಗಣಿಸುತ್ತಾರೆ. ಇಂತಹ ನಿಯಮ ಪಾಲನೆ ಮಾಡದ ಪ್ರಯಾಣಿಕನೊಬ್ಬ ತನ್ನ ಎಡಗೈಯನ್ನು ಕಿಟಕಿಯಾಚೆ ಹಾಕಿದ್ದು, ಇದರ ಪರಿಣಾಮವಾಗಿ ತನ್ನ ಕೈಯನ್ನು ಕಳೆದುಕೊಂಡಿದ್ದಾರೆ. ಬಸ್ನಲ್ಲಿ ಸಂಭವಿಸಿದ ಈ ದುರಂತವನ್ನು ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದಿದ್ದು, ಈ ದೃಶ್ಯಗಳು ಇದೀಗ ವೈರಲ್ ಆಗಿವೆ.
ವೈರಲ್ ವಿಡಿಯೋ:
ವೈರಲ್ ವಿಡಿಯೋದಲ್ಲಿ, ಪ್ರಯಾಣಿಕನೋರ್ವ ಬಸ್ ಕಿಟಕಿ ಬದಿಯ ಆಸನದಲ್ಲಿ ಕುಳಿತಿರುವುದು ಕಾಣಸಿಗುತ್ತದೆ. ಈ ವೇಳೆ ವ್ಯಕ್ತಿ ತನ್ನ ಎಡಗೈಯನ್ನು ಕಿಟಕಿಯಾಚೆ ಹಾಕಿ ಹೊರಗೆ ನೋಡುತ್ತಿದ್ದಾನೆ. ಅದೆ ಸಮಯದಲ್ಲಿ ಮತ್ತೊಂದು ವಾಹನ, ಬಸ್ ಬದಿಯಲ್ಲಿಯೇ ಹೋಗಿದ್ದು, ವೇಗದ ಪರಿಣಾಮ ಪ್ರಯಾಣಿಕನ ಕೈ ಕಟ್ ಆಗಿದೆ. ಮೊಣಕೈಯವರೆಗೆ ಕೈ ಕಟ್ ಆಗಿದ್ದು, ಘಟನೆ ಎಲ್ಲಿ ನಡೆದಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.
Also Read: ವೈರಲ್ ವಿಡಿಯೋ: ಅಮೆರಿಕದಲ್ಲಿ ಶಾರ್ಕ್ ದಾಳಿ – ರಕ್ತದಿಂದ ಕೆಂಪಾದ ಸಮುದ್ರದ ನೀರು
ಸಮಾಜದಲ್ಲಿ ಪ್ರತಿಕ್ರಿಯೆಗಳು:
@Deadlykalesಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 41 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಬಳಿಕ, ನಾವೆಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮಕ್ಕಳನ್ನು ಕಿಟಕಿ ಆಸನದಲ್ಲಿ ಕೂರಿಸಿದಾಗ ಗ್ಲಾಸ್ಗಳನ್ನು ಹಾಕಬೇಕು, ಮತ್ತು ಮುಂಜಾಗ್ರತಾ ಕ್ರಮವಾಗಿ ಪೋಷಕರೇ ಕಿಟಕಿ ಪಕ್ಕ ಕುಳಿತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
See Twitter Video – Click Here
ಹೆಚ್ಚಿನ ಎಚ್ಚರಿಕೆ:
ಬಸ್ ಅಥವಾ ಯಾವುದೇ ವಾಹನದಲ್ಲಿ ಪ್ರಯಾಣಿಸುವಾಗ ಕೆಲವರು ಪದೇ ಪದೇ ತಲೆಯನ್ನು ಹೊರಗೆ ಹಾಕುತ್ತಾರೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಗುಟ್ಕಾ ಉಗಳಲು ಹೋಗಿದ್ದ ವ್ಯಕ್ತಿಯ ತಲೆ ಕಟ್ ಆಗಿತ್ತು. ಇದಲ್ಲದೇ, ವಾಂತಿ ಬರುವವರೂ ತಲೆಯನ್ನು ಹೊರಗೆ ಹಾಕುತ್ತಿರುತ್ತಾರೆ. ಇಂತಹವರು ಸಹ ಈ ವಿಡಿಯೋ ನೋಡಿ ಎಚ್ಚೆತ್ತುಕೊಳ್ಳಬೇಕು. ಇತ್ತೀಚೆಗೆ ಮಹಿಳೆಯೊಬ್ಬರ ಕತ್ತು ಕಿಟಕಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಘಟನೆಯ ವಿಡಿಯೋ ಕೂಡಾ ವೈರಲ್ ಆಗಿತ್ತು.
ಪ್ರಯಾಣದ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಈ ಘಟನೆ ನಮಗೆ ಎಚ್ಚರಿಕೆಯಾದಂತಾಗಿದೆ.