ಬೆಂಗಳೂರು, ಜುಲೈ 1: ಭಾರತದ ಪ್ರಥಮ ಮಾನವ ಬಾಹ್ಯಾಕಾಶ ಮಿಷನ್ ಗಗನ್ಯಾನ್ ಕಾರ್ಯಾರಂಭದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶಕ್ಕೆ ಹಾರಬಹುದು ಎಂಬ ಶೋಚನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಪ್ರಕಟಿಸಿದ್ದಾರೆ.
ಗಗನ್ಯಾನ್ ಮಿಷನ್:
ಗಗನ್ಯಾನ್ ಮಿಷನಿನಲ್ಲಿ ಇಸ್ರೋ ಮೂವರು ಗಗನಯಾತ್ರಿಗಳನ್ನು 400 ಕಿಲೋಮೀಟರ್ ಕಕ್ಷೆಗೆ ಕಳುಹಿಸಿ, ಮೂರು ದಿನಗಳ ಬಳಿಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸಲು ಯೋಜಿಸಿದೆ. ಗಗನ್ಯಾನ್ ಯೋಜನೆ ₹90 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಯಶಸ್ವಿಯಾದರೆ, ಭಾರತ ಸೋವಿಯತ್ ಯೂನಿಯನ್, ಅಮೇರಿಕಾ ಮತ್ತು ಚೀನಾದ ನಂತರ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ನಾಲ್ಕನೇ ದೇಶವಾಗಲಿದೆ.

ಪೈಲಟ್ಗಳ ಆಯ್ಕೆ:
ಫೆಬ್ರವರಿಯಲ್ಲಿ, ಭಾರತದ ಐತಿಹಾಸಿಕ ಪ್ರಥಮ ಮಾನವ ಸಹಿತ ಬಾಹ್ಯಾಕಾಶ ಮಿಷನ್ಗಾಗಿ ಆಯ್ಕೆಯಾದ ನಾಲ್ವರು ಪೈಲಟ್ಗಳನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಈ ಗಗನಯಾತ್ರಿಗಳು: ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್, ಮತ್ತು ವಿಂಗ್ ಕಮಾಂಡರ್ ಸುಭಾನ್ಶು ಶುಕ್ಲಾ.
Also Read: T20 ವಿಶ್ವಕಪ್ ಗೆಲುವು: ರೋಹಿತ್, ಕೊಹ್ಲಿ, ದ್ರಾವಿಡ್ಗೆ ಮೋದಿ ಕರೆ, ಟೀಂ ಇಂಡಿಯಾವನ್ನು ಅಭಿನಂದಿಸಿದ ಪ್ರಧಾನಿ
ಅಮೃತ್ ಕಾಲ್ ವಿಷನ್:
ಜೂನ್ 26 ರಂದು, ಸೋಮನಾಥ್ ಅವರು ಭಾರತ ಬಾಹ್ಯಾಕಾಶ ಕಾಂಗ್ರೆಸ್ 2024 ನಲ್ಲಿ ಮಾತನಾಡುವ ವೇಳೆ, 2040 ರ ವೇಳೆಗೆ ಚಂದ್ರನ ಮೇಲೆ ಇಳಿಯುವ ಗಗನ್ಯಾನ್ ಮಿಷನ್ ಮೀರಿ, ಭವಿಷ್ಯದ ಮಾನವ ಬಾಹ್ಯಾಕಾಶ ಚಟುವಟಿಕೆಗಳನ್ನು ವಿಸ್ತರಿಸುವ ಪ್ರಧಾನ ಮಂತ್ರಿ ಮೋದಿಯವರ ಅಮೃತ್ ಕಾಲ್ ದೃಷ್ಟಿಯನ್ನು ವಿವರಿಸಿದರು.
🚨 "PM Narendra Modi can fly to space in India’s first human mission when it is operational. All of us will be very proud if we have the ability to confidently send the head of state to space," says ISRO Chairman S. Somnath. pic.twitter.com/FINQ1wcj1K
— Indian Tech & Infra (@IndianTechGuide) July 1, 2024
ಭವಿಷ್ಯದ ತಂತ್ರಜ್ಞಾನ:
ಪ್ರಸ್ತುತ, ಇಸ್ರೋ ಬಳಕೆ ಮಾಡುತ್ತಿರುವ ರಾಕೆಟ್ಗಳು ಚಂದ್ರನ ಸುತ್ತಿನ ಪ್ರಯಾಣಕ್ಕೆ ತಕ್ಕಷ್ಟು ಸಾಮರ್ಥ್ಯ ಹೊಂದಿಲ್ಲ. ಆದ್ದರಿಂದ, ಮಾದರಿಗಳನ್ನು ಮರಳಿ ತರಲು ಮತ್ತು ಭವಿಷ್ಯದ ಮಾನವ ಕಾರ್ಯಾಚರಣೆಗಳಿಗೆ ಹೆಚ್ಚಿನ ಪೇಲೋಡ್ ಸಾಮರ್ಥ್ಯ ಹೊಂದಿರುವ ರಾಕೆಟ್ಗಳನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವೆಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ.
🗣 Dr. Somanath has said that the design of the first module of Bharatiya Antariksh Station is complete! 🛰
He also added that #ISRO wants BAS to be complimentary to other space stations & for #Gaganyaan to have the capability to exchange crew & cargo with other stations! 👨🚀 pic.twitter.com/u7INPsPtUZ
— ISRO Spaceflight (@ISROSpaceflight) July 1, 2024
ಈ ಮಿಷನ್ ಯಶಸ್ವಿಯಾಗಿ ನಡೆದರೆ, ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಮ್ಮೆ ಮಹತ್ವದ ಮೈಲುಗಲ್ಲು ಸಾಧಿಸಲಿದೆ.