ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ರೀಲ್ಸ್ ಸ್ಟಾರ್ ಮಂಗಳ ಅರುಣ್ ಬಹಳ ಪರಿಚಿತರ. ಇವರು ಮೂರು ಮಕ್ಕಳ ತಾಯಿಯಾಗಿದ್ದರೂ, ಭರ್ಜರಿಯಾಗಿ ನೃತ್ಯ ಮಾಡುವ ಮೂಲಕ ಪಡ್ಡೆ ಹುಡುಗರ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ, ಇವರು ಹೊಸ ಸ್ಕೂಟಿಯೊಂದನ್ನು ಖರೀದಿಸಿದ್ದಾರೆ. ಈ ಕುರಿತ ಫೋಟೋಗಳು ಈಗ ವೈರಲ್ ಆಗಿದ್ದು, ನೆಟ್ಟಿಗರಿಂದ ಅಭಿನಂದನೆಗಳನ್ನು ಪಡೆದಿವೆ.
ರೀಲ್ಸ್ ಸ್ಟಾರ್ ಮಂಗಳ ಅರುಣ್ ಯಶಸ್ಸಿನ ಕಥೆ
ಫೇಸ್ಬುಕ್, ಇನ್ಸ್ಟಾಗ್ರಾಂ ತೆರೆದರೆ ಸಾಕು, ರೀಲ್ಸ್ಗಳದ್ದೇ ಹವಾ. ಈ ರೀಲ್ಸ್ ವಿಡಿಯೋಗಳಿಂದ ಹಲವರು ಫೇಮಸ್ ಆಗಿ, ಯಶಸ್ಸನ್ನು ಕಂಡಿದ್ದಾರೆ. ಮಂಗಳ ಅರುಣ್ ಕೂಡ ತಮ್ಮ ಅದ್ಭುತ ಪ್ರತಿಭೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಇವರ ಅದ್ಭುತ ಡಾನ್ಸ್, ಟ್ರಾನ್ಸಿಷನ್ ರೀಲ್ಸ್ಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಮಂಗಳ ಅರುಣ್ ತಮ್ಮ ಅಭಿಮಾನಿಗಳ ಮನಸು ಗೆದ್ದಿದ್ದಾರೆ.

ಹೊಸ ಸ್ಕೂಟಿಯ ಖರೀದಿ
ಮಂಗಳ ಅರುಣ್ ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ಅವರು ಮೂರು ಮಕ್ಕಳಿದ್ದರೂ ಮನೆಯಲ್ಲಿ ಸುಮ್ಮನೆ ಕೂರದೆ, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇನ್ಸ್ಟಾಗ್ರಾಂನಲ್ಲಿ ಡಾನ್ಸ್, ಟ್ರಾನ್ಸಿಷನ್ ರೀಲ್ಸ್ ಮಾಡುವ ಮೂಲಕ ಸ್ಟಾರ್ ಆಗಿದ್ದಾರೆ. ಈ ರೀಲ್ಸ್ ಮಾಡ್ತಾ ಮಾಡ್ತಾ ಇದೀಗ ಇವರು ಹೊಸ ಸ್ಕೂಟಿಯನ್ನೇ ಖರೀದಿಸಿದ್ದಾರೆ.
Also Read: ವೈರಲ್: 20 ಪ್ರಿಯಕರರಿಂದ 20 ಐಫೋನ್ ಗಿಫ್ಟ್, ಎಲ್ಲ ಫೋನ್ ಮಾರಿ ಹೊಸ ಮನೆ ಖರೀದಿಸಿದ ಯುವತಿ
ಸೋಶಿಯಲ್ ಮೀಡಿಯಾದಲ್ಲಿ ಖುಷಿಯ ಹಂಚಿಕೆ
ಮಂಗಳ ಅರುಣ್ (arunmangalaa) ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ “ಹೊಸ ಸ್ಕೂಟಿ ಖರೀದಿಸಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ. ವೈರಲ್ ಫೋಟೋದಲ್ಲಿ ಮಂಗಳ ಅವರು ಹೊಸ ಹೋಂಡಾ ಆಕ್ಟಿವಾದಲ್ಲಿ ಕುಳಿತು, ಸ್ಟೈಲ್ ಆಗಿ ಪೋಸ್ ಕೊಟ್ಟಿರುವ ಕ್ಯೂಟ್ ದೃಶ್ಯವನ್ನು ಕಾಣಬಹುದು.
ನೆಟ್ಟಿಗರಿಂದ ಅಭಿನಂದನೆ
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 23 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. “ಅಭಿನಂದನೆಗಳು, ಇದೇ ರೀತಿ ಇನ್ನೂ ಎತ್ತರಕ್ಕೆ ಬೆಳೆಯಿರಿ” ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.