ಈಗ ಜನರಿಗೆ ಕುಳಿತಲ್ಲಿಯೇ ಎಲ್ಲಾ ಮಾಹಿತಿ ಸಿಗುತ್ತದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಬೇರೆ ಪ್ರಪಂಚವೇ ತೆರೆಯುತ್ತದೆ. ಈಗಂತೂ ರೀಲ್ಸ್ನ ಜಮಾನ. ಏನೇ ಮಾಡಿದರೂ ವಿಡಿಯೊ ಮಾಡುವುದು ಈಗಿನ ಟ್ರೆಂಡ್. ಈ ವಿಡಿಯೊಗಳು ಕೂಡ ಕಣ್ಣುಮುಚ್ಚಿ ತೆರೆಯುವುದೊರಳಗೆ ವೈರಲ್ ಆಗಿ ಬಿಡುತ್ತವೆ. ಇದರಲ್ಲಿ ಕೆಲವೊಂದು ಘಟನೆಗಳು ಜನರ ಗಮನ ಸೆಳೆದು ಹೆಚ್ಚು ವೈರಲ್ ಆಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿ ಸಖತ್ ವೈರಲ್ ಆಗಿರುವ ಐದು ವಿಡಿಯೊಗಳು ಇಲ್ಲಿವೆ ನೋಡಿ.
ಮಿಸ್ ಮಾಡದೇ ನೋಡಿ, ಈ ಅಸಾಧಾರಣ ಘಟನೆಗಳನ್ನು!
1. ವಿರಾಟ್ ಕೊಹ್ಲಿಯ ಅಲಿಬಾಗ್ ಬಂಗಲೆ:
ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮುಂಬಯಿಯ ಅಲಿಬಾಗ್ನಲ್ಲಿರುವ ತಮ್ಮ ಐಷಾರಾಮಿ ಬಂಗಲೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಕೊಹ್ಲಿ ತಮ್ಮ ಬಂಗಲೆಯನ್ನು ನಿರ್ಮಿಸಿರುವ ಪ್ರಯಾಣದ ಸಣ್ಣ ತುಣುಕನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ.
2. ವಿದ್ಯುತ್ ಕಂಬದ ಮೇಲೆ ಮಹೀಂದ್ರಾ ಥಾರ್:
ಹರಿಯಾಣದ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಲ್ಲಿ ವೇಗವಾಗಿ ಬರುತ್ತಿದ್ದ ಮಹೀಂದ್ರಾ ಥಾರ್ವೊಂದು ಹೋಂಡಾ ಅಮೇಜ್ಗೆ ಡಿಕ್ಕಿ ಹೊಡೆದ ನಂತರ ವಿದ್ಯುತ್ ಕಂಬದ ಮೇಲೆರಿದಿದೆ. ಈ ಅಪಘಾತದ ಸ್ಥಳದಲ್ಲಿ ಹಲವಾರು ಜನರು ಮತ್ತು ಪೊಲೀಸರು ಜಮಾಯಿಸಿದ್ದು, ಈ ದೃಶ್ಯ ಸಖತ್ ವೈರಲ್ ಆಗಿದೆ.
Also Read: ವೈರಲ್: 20 ಪ್ರಿಯಕರರಿಂದ 20 ಐಫೋನ್ ಗಿಫ್ಟ್, ಎಲ್ಲ ಫೋನ್ ಮಾರಿ ಹೊಸ ಮನೆ ಖರೀದಿಸಿದ ಯುವತಿ
Rat in the "Chutney" in the JNTUH SULTANPUR.
What hygiene maintenance by the staff members is in a mess.@FoodCorporatio2 @examupdt @ABVPTelangana @NtvTeluguLive @hmtvnewslive @TV9Telugu @htTweets @KTRBRS @DamodarCilarapu @PawanKalyan @JanaSenaParty @Way2NewsTelugu pic.twitter.com/Es7bGLzRdP
— @Lakshmi Kanth (@330Kanth41161) July 8, 2024
3. ಚಟ್ನಿಯಲ್ಲಿ ಇಲಿಯ ಈಜು:
ಸುಲ್ತಾನ್ಪುರದ ಜವಾಹರಲಾಲ್ ನೆಹರು ಟೆಕ್ನಿಕಲ್ ಯುನಿವರ್ಸಿಟಿಯ ಹಾಸ್ಟೆಲ್ನ ಕ್ಯಾಂಟಿನ್ನಲ್ಲಿ ನೀಡಿದ ಚಟ್ನಿಯಲ್ಲಿ ಇಲಿಯೊಂದು ತೇಲುತ್ತಿದ್ದು, ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಹಳದಿ ಚಟ್ನಿ ತುಂಬಿದ ಕಂಟೇನರ್ನಲ್ಲಿ ಇಲಿ ಈಜುತ್ತಿರುವುದನ್ನು ವ್ಯಕ್ತಿಯೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
They did a collab between Railways and Waterways during #MumbaiRains 😢 pic.twitter.com/NWaEoBHGCJ
— Godman Chikna (@Madan_Chikna) July 8, 2024
4. ಮುಂಬೈ ಸ್ಥಳೀಯ ರೈಲುಗಳ ಸಾಹಸ:
ಭಾರೀ ಮಳೆಯಿಂದಾಗಿ ಜಲಾವೃತಗೊಂಡು ರೈಲ್ವೆ ಹಳಿಗಳು ಕಾಣಿಸದೆ ಇರುವಾಗ ಸ್ಥಳೀಯ ರೈಲು ತಡೆಬಿಡದೆ ಹಾದುಹೋಗಿರುವ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಸಾಹಸಾತ್ಮಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Also Read: Kissing ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿ! ಏನಿದು ಹೊಸ ಕಾಯಿಲೆ, ಲಕ್ಷಣಗಳೇನು?
#WATCH | Tiruchirappalli, Tamil Nadu: Rohini, a girl belonging to a tribal community clears the JEE exam and will join the National Institute of Technology, Trichy. pic.twitter.com/gmhlN5CZdd
— ANI (@ANI) July 9, 2024
5. ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಬುಡಕಟ್ಟು ಬಾಲಕಿ:
ತಮಿಳುನಾಡಿನ ತಿರುಚಿರಾಪಳ್ಳಿಯ ಪಚಮಲೈ ಬೆಟ್ಟಗಳ 18 ವರ್ಷದ ಬುಡಕಟ್ಟು ಬಾಲಕಿ ರೋಹಿಣಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯಲ್ಲಿ ತೇರ್ಗಡೆಯಾಗಿರುವುದು ಅತ್ಯಂತ ವಿಶೇಷ. ಆಕೆಗೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೋಹಿಣಿ ತನ್ನ ಹಳ್ಳಿಯ ಮನೆಯಲ್ಲಿ ಕಟ್ಟಿಗೆಯ ಒಲೆಯಲ್ಲಿ ಬೆಂಕಿ ಹಚ್ಚಿ ಅಡುಗೆ ಮಾಡುತ್ತಿರುವುದು ಕಾಣಬಹುದು.