ಅತ್ಯಾಚಾರಕ್ಕೆ ಯತ್ನ, ದೇವರಂತೆ ಬಂದು ಆಕೆಯನ್ನು ಕಾಪಾಡಿದ ಬೀದಿ ನಾಯಿ
ನಾಯಿ ಮತ್ತು ಮನುಷ್ಯನ ಸಂಬಂಧವನ್ನು ಹೇಳಬೇಕಾಗಿಲ್ಲ. ನಂಬಿಕೆ ಮತ್ತು ವಿಶ್ವಾಸಕ್ಕೆ ಅನ್ವರ್ಥವಾಗಿರುವ ಶ್ವಾನಗಳು ನಮಗಾಗಿ ತ್ಯಾಗಕ್ಕೂ, ಅಪಾಯಗಳನ್ನು ಎದುರಿಸಲು ಹಿಂಜರಿಯುವುದಿಲ್ಲ. ಇಂತಹೇ ಒಂದು ಸೂಕ್ತ ಉದಾಹರಣೆ ಇತ್ತೀಚೆಗಷ್ಟೇ ನಡೆದಿದೆ. ಬೀದಿ ನಾಯಿಯೊಬ್ಬಳು ಮಹಿಳೆಯನ್ನು ಅತ್ಯಾಚಾರ ಪ್ರಯತ್ನದಿಂದ ರಕ್ಷಿಸಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ಮುಂಬೈ:
ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಶ್ವಾನಗಳು ತಮ್ಮ ಮಾಲೀಕರಿಗಾಗಿ ಎಂತಹ ತ್ಯಾಗಕ್ಕೂ, ಎಂತಹ ಅಪಾಯಗಳನ್ನು ಎದುರಿಸಲು ಹಿಂಜರಿಯುವುದಿಲ್ಲ. ಅಷ್ಟೇ ಅಲ್ಲದೆ, ಬೀದಿ ನಾಯಿಗಳು ಸಹ ಮನುಷ್ಯನ ಸಹಾಯಕ್ಕೆ ಧಾವಿಸಿರುವ ಅನೆಕ ನಿದರ್ಶನಗಳಿವೆ. ಇಂತಹದೇ ಒಂದು ಘಟನೆ ಇತ್ತೀಚೆಗೆ ಮುಂಬೈನಲ್ಲಿ ನಡೆದಿದೆ.

ಘಟನೆ ವಿವರ:
ಜೂನ್ 30 ರಂದು ಮುಂಬೈನ ವಾಸಯಿ ಎಂಬ ಪ್ರದೇಶದಲ್ಲಿ, 32 ವರ್ಷದ ಮಹಿಳೆಯೊಬ್ಬಳು ರಾತ್ರಿ 1.30ರ ಹೊತ್ತಿಗೆ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ, 35 ವರ್ಷದ ಸಂದೀಪ್ ಖೋತ್ ಎಂಬಾತನಿಂದ ಹಿಂಬಾಲಿಸಲ್ಪಟ್ಟು, ಅತ್ಯಾಚಾರಕ್ಕೆ ಯತ್ನಿಸಲ್ಪಟ್ಟಿದ್ದಾಳೆ. ಅಕೌಂಟೆಂಟ್ ಆಗಿರುವ ಆ ಮಹಿಳೆಯನ್ನು ತಾನು ಬಾಯಿಬ್ದಿ ಹಿಡಿದು, ನೆಲಕ್ಕೆ ತಳ್ಳಿದ ಸಂದೀಪ್, ಅತ್ಯಾಚಾರ ಮಾಡಲು ಮುಂದಾದನು.
Also Read: ಕೇರಳವನ್ನು ಕಾಡುತ್ತಿದೆ ಮೆದುಳು ತಿನ್ನುವ ಅಮೀಬಾ ಸೋಂಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್
ಅದೇ ಸಮಯದಲ್ಲಿ, ಸ್ಥಳೀಯ ಬೀದಿ ನಾಯಿಯೊಂದು ಜೋರಾಗಿ ಬೊಗಳಿದ್ದು, ಸಂದೀಪ್ ಕಕ್ಕಾಬಿಕ್ಕಿಯಾಗುವಂತೆ ಮಾಡಿತು. ಇದರ ಸದುಪಯೋಗವನ್ನು ಪಡೆದುಕೊಂಡ ಮಹಿಳೆ ಅಲ್ಲಿಂದ ಓಡಿ ಹೋಗಲು ಯಶಸ್ವಿಯಾದಳು.
ಪೋಲೀಸರಿಗೆ ದೂರು:
ಮಹಿಳೆ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, “ನಾನು ನಡೆದುಕೊಂಡು ಹೋಗುತ್ತಿದ್ದಾಗ ಆತನನ್ನು ಹಿಂಬಾಲಿಸುತ್ತಾ ಬಂದ, 25-30 ವರ್ಷದ ವ್ಯಕ್ತಿಯೊಬ್ಬ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ. ಬಾಯಿಬ್ದಿ ಹಿಡಿದು, ನೆಲಕ್ಕೆ ತಳ್ಳಿದಾಗ, ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ. ಆದರೆ, ಅಲ್ಲಿಗೆ ಬಂದ ಬೀದಿ ನಾಯಿ ಜೋರಾಗಿ ಬೊಗಳುವುದರಿಂದ ನಾನು ಓಡಲು ಯತ್ನಿಸಿದೆ. ಆ ಸಮಯದಲ್ಲಿ ನನ್ನ ಐಫೋನ್ ಅನ್ನು ಆತ ಕಸಿದುಕೊಂಡ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಆರೋಪಿ ಬಂಧನ:
ಮಹಿಳೆಯ ದೂರಿನ ಮೇರೆಗೆ, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಹಿಳೆಯನ್ನು ಹಿಂಬಾಲಿಸುತ್ತಿರುವ ದೃಶ್ಯ ಸಿಕ್ಕಿದ್ದು, 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ತಿಳಿಸಿದ್ದಾರೆ.