ಆಕಾಶದಲ್ಲಿ ಗಾಳಿಗೆ ಅಲುಗಾಡಿದ ವಿಮಾನ, ಲಗೆಜ್ ಕಂಪಾರ್ಟ್ಮೆಂಟ್ನಲ್ಲಿ ಸಿಲುಕಿದ ಪ್ರಯಾಣಿಕ
ವಾಯು ಪ್ರಕ್ಷುಬ್ಧತೆಯ ಪರಿಣಾಮದಿಂದ ಅನೇಕ ವಿಮಾನ ಅಪಘಾತಗಳು, ಸಾವು ನೋವುಗಳು ಸಂಭವಿಸಿವೆ. ಇತ್ತೀಚೆಗೆ ಸ್ಪೇನ್ನ ಮ್ಯಾಡ್ರಿಡ್ನಿಂದ ಉರುಗ್ವೆಗೆ ತೆರಳಿದ್ದ ಏರ್ ಯುರೋಪಾ ಬೋಯಿಂಗ್ 787-9 ಡ್ರೀಮ್ ಲೈನರ್ ವಿಮಾನದಲ್ಲಿ ಭಾರೀ ಪ್ರಕ್ಷುಬ್ಧತೆ ಕಂಡುಬಂದಿದ್ದು, ಇದರ ಪರಿಣಾಮ ಒಬ್ಬ ಪ್ರಯಾಣಿಕ ಲಗೆಜ್ ಕಂಪಾರ್ಟ್ಮೆಂಟ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ, ಹಲವರಿಗೆ ಗಾಯಗಳಾಗಿವೆ.
Also Read: ಬಾಯ್ಫ್ರೆಂಡ್ ಜೊತೆಗೆ ಬದುಕಲು ಗಂಡನೇ ಖರ್ಚು ಮಾಡಬೇಕು! ಹೆಂಡತಿಯ ಬೇಡಿಕೆಯಿಂದ ಪತಿ ಶಾಕ್!
ವಿಮಾನ ಹಾರಾಟದ ವೇಳೆ ಹವಾಮಾನವು ಕೆಟ್ಟಾಗ, ತೀವ್ರವಾಗಿ ಅಲುಗಾಡುವುದು ಸಾಮಾನ್ಯ. ಈ ಸಮಯದಲ್ಲಿ, ವಾಯು ಪ್ರಕ್ಷುಬ್ಧತೆಯಿಂದಾಗಿ ವಿಮಾನ ತೀವ್ರವಾಗಿ ಅಲುಗಾಡತೊಡಗಿ, ಪ್ರಯಾಣಿಕರಿಗೆ ಆತಂಕ ಉಂಟಾಗುತ್ತದೆ. ಸ್ಪೇನ್ನ ಮ್ಯಾಡ್ರಿಡ್ನಿಂದ ಉರುಗ್ವೆಯ ರಾಜಧಾನಿ ಮಾಂಟೆವಿಡಿಯೊಗೆ ಹೊರಟಿದ್ದ ಏರ್ ಯುರೋಪಾ ವಿಮಾನವು ಈ ಪರಿಸ್ಥಿತಿಗೆ ತುತ್ತಾಗಿದ್ದು, ಲಗೆಜ್ ಕಂಪಾರ್ಟ್ಮೆಂಟ್ನಲ್ಲಿ ಒಬ್ಬ ಪ್ರಯಾಣಿಕ ಸಿಕ್ಕಿಹಾಕಿಕೊಂಡಿದ್ದಾನೆ.
ಈ ಘಟನೆಗೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಪ್ರಯಾಣಿಕರು ಆತಂಕದಿಂದ ವಿಮಾನದ ಲಗೆಜ್ ಕಂಪಾರ್ಟ್ಮೆಂಟ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯನ್ನು ಹೊರತೆಗೆದುಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು.
#Breaking
Severe turbulence on an Air Europe flight resulted in a passenger being thrown into the overhead luggage compartment, with at least 30 people injured. The plane safely landed in Brazil. pic.twitter.com/i6tpBArHaQ
— Sneha Mordani (@snehamordani) July 1, 2024
ಈ ವಿಮಾನವನ್ನು ನಂತರ ಸುರಕ್ಷಿತವಾಗಿ ಬ್ರೆಜಿಲ್ನಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ. ವೀಡಿಯೊವನ್ನು ಸ್ನೇಹಾ(snehamordani) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು, ನೆಟ್ಟಿಗರನ್ನು ಶಾಕ್ಗೊಳಿಸಿದೆ.