ಇ-ಸ್ಕೂಟರ್ಗಳಿಗಾಗಿ ಸಾಲು.. ಮೊಬೈಲ್ನಂತೆ ಸೇಲ್!
ಇಂದು ಪ್ರತಿಯೊಬ್ಬರಿಗೂ ದ್ವಿಚಕ್ರ ವಾಹನಗಳು ದಿನನಿತ್ಯದ ಅನಿವಾರ್ಯತೆಯ ಭಾಗವಾಗಿದೆ. ಪುರುಷರು, ಮಹಿಳೆಯರು, ಯುವಕರು ಎಲ್ಲರಿಗೂ ಸ್ಕೂಟರ್ಗಳು ಹೆಚ್ಚು ಸೂಕ್ತವಾಗಿದೆ. ಇತ್ತೀಚೆಗೆ ಪೆಟ್ರೋಲ್ ಬೆಲೆ ಗಗನಕ್ಕೇರಿರುವ ಕಾರಣ, ಹಲವರು ಎಲೆಕ್ಟ್ರಿಕ್ ಸ್ಕೂಟರ್ಗಳ ಕಡೆಗೆ ಮುಖ ಮಾಡಿದ್ದಾರೆ. ಟಿವಿಎಸ್, ಓಲಾ, ಎಥರ್, ಹೀರೋಹಾಗೂ ಬಜಾಜ್ಕಂಪನಿಗಳು ಸುಂದರ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಇ-ಸ್ಕೂಟರ್ಗಳನ್ನು ಮಾರುಕಟ್ಟೆಗೆ ತಂದಿವೆ.
2023ರಲ್ಲಿ ಎಲ್ಲಾ ಪ್ರಮುಖ ವಾಹನ ತಯಾರಕರು ಒಟ್ಟಾಗಿ 8,60,365 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡಿದ್ದು, ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.
ಓಲಾ ಎಲೆಕ್ಟ್ರಿಕ್ (36,716 ಯುನಿಟ್ಗಳು):
ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ (Ola Electric) ಮುಂಚೂಣಿಯಲ್ಲಿದ್ದು, ಜೂನ್ 2024ರಲ್ಲಿ 36,716 ಯುನಿಟ್ಗಳನ್ನು ಮಾರಾಟ ಮಾಡಿದೆ. 2023ರ ಜೂನ್ ಹೋಲಿಸಿದರೆ 107% ಪ್ರಗತಿ ಕಂಡುಬಂದಿದೆ.
ಓಲಾ ಎಲೆಕ್ಟ್ರಿಕ್ ವಿವಿಧ ಮಾದರಿಗಳನ್ನು ಒದಗಿಸುತ್ತಿದ್ದು, ‘ಎಸ್1 ಎಕ್ಸ್ ಪ್ಲಸ್’ರೂ.74,999 ದಿಂದ ರೂ.99,999, ‘ಓಲಾ ಎಸ್1 ಏರ್’ ರೂ.1,06,499, ಮತ್ತು ಟಾಪ್ ಎಂಡ್ ಮಾಡೆಲ್ ‘ಓಲಾ ಎಸ್1 ಪ್ರೊ’ ರೂ.1,32,499 ಎಕ್ಸ್ ಶೋರೂಂ ದರವನ್ನು ಹೊಂದಿದೆ.
ಟಿವಿಎಸ್ (13,897 ಯುನಿಟ್ಗಳು):
ದ್ವಿತೀಯ ಸ್ಥಾನದಲ್ಲಿ ಟಿವಿಎಸ್ಮೋಟಾರ್ಸ್ ಇದ್ದು, ಜೂನ್ 2024ರಲ್ಲಿ 13,897 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡಿದೆ. ಮೇ ತಿಂಗಳ 11,844 ಯುನಿಟ್ ಹೋಲಿಸಿದರೆ 51% ಬೆಳವಣಿಗೆ ಕಂಡಿದೆ.
ಟಿವಿಎಸ್ ಐಕ್ಯೂಬ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ರೂ.94,999 ದಿಂದ ರೂ.1,85,373 ಎಕ್ಸ್ ಶೋರೂಂ ದರ ಹೊಂದಿದೆ. ಈ ಸ್ಕೂಟರ್ 2.2 ಕೆಡಬ್ಲ್ಯೂಹೆಚ್, 3.4 ಕೆಡಬ್ಲ್ಯೂಹೆಚ್ ಮತ್ತು 5.1 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, 75 ಕಿ.ಮೀದಿಂದ 150 ಕಿ.ಮೀವರೆಗೆ ಸವಾರಿ ನೀಡುತ್ತದೆ.
ಬಜಾಜ್ (8,985 ಯುನಿಟ್ಗಳು):
ಮೂರನೇ ಸ್ಥಾನವನ್ನು ಬಜಾಜ್ಆಟೋ ಅಲಂಕರಿಸಿದ್ದು, ಜೂನ್ 2024ರಲ್ಲಿ 8,985 ‘ಚೇತಕ್‘ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡಿದೆ.
ಹೊಸ ಬಜಾಜ್ ಚೇತಕ್ ಎ-ಸ್ಕೂಟರ್ ರೂ.95,998 ದಿಂದ ರೂ.1.56 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ನಲ್ಲಿ 126 ಕಿ.ಮೀವರೆಗೆ ಸವಾರಿ ನೀಡುತ್ತದೆ.
ಎಥರ್ ಎನರ್ಜಿ (6,097 ಯುನಿಟ್ಗಳು):
ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) 6,097 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಜೂನ್ 2024ರಲ್ಲಿ ಮಾರಾಟ ಮಾಡಿದೆ.
ಎಥರ್ 450ಎಕ್ಸ್, ಎಥರ್ 450ಎಸ್ ಮತ್ತು ಎಥರ್ ರಿಜ್ಟಾ ಮಾದರಿಗಳು ಪ್ರಸ್ತುತ ಖರೀದಿಗೆ ಲಭ್ಯವಿವೆ.
Also Read: ರಾಯಲ್ ಎನ್ಫೀಲ್ಡ್ ಹೊಸ ಲಾಂಚ್: ಗೆರಿಲ್ಲಾ 450 ಬಿಡುಗಡೆಗೆ ಸಜ್ಜು
ಹೀರೋ (3,068 ಯುನಿಟ್ಗಳು):
ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೊಕಾರ್ಪ್, ಜೂನ್ 2024ರಲ್ಲಿ 3,068 ‘ವಿಡಾ’ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡಿದೆ.
ಹೀರೋ ವಿಡಾ ವಿ1, ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ರೂ.1.20 ಲಕ್ಷದಿಂದ ರೂ.1.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಇ-ಸ್ಕೂಟರ್ಗಳ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ದಾರಿತೆ, ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬದಲಿಸುವ ಲಕ್ಷಣಗಳು ಕಾಣಿಸುತ್ತಿವೆ.