ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಮತ್ತು ಲೈಕ್ಸ್, ಫಾಲೋವರ್ಸ್ ಗಳಿಸಲು ಕೆಲವರು ಯಾವ ಹಂತಕ್ಕೂ ಹೋಗುತ್ತಾರೆ. ಇಂತಹದ್ದೇ ಘಟನೆಯಲ್ಲಿ, ನವ ಜೋಡಿ ತಮ್ಮ ಮೊದಲ ರಾತ್ರಿಯ ವ್ಲಾಗ್ ಮಾಡಿದ್ದು, ಅದು ಭಾರೀ ವೈರಲ್ ಆಗಿದೆ. ನೆಟ್ಟಿಗರು ಈ ಜನರು ಏನ್ ಬೇಕಾದರೂ ಮಾಡ್ತಾರೆ ಎಂದು ಗರಂ ಆಗಿದ್ದಾರೆ.
ವೀಡಿಯೋ ಮತ್ತು ನೆಟ್ಟಿಗರ ಪ್ರತಿಕ್ರಿಯೆ:
ಸೋಶಿಯಲ್ ಮೀಡಿಯಾ ಈಗ ಜನರ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ. ಯೂಟ್ಯೂಬ್‌ನಲ್ಲಿ ಸಾವಿರಾರು ಕ್ರಿಯೇಟರ್ಸ್ ತಮ್ಮ ದಿನನಿತ್ಯದ ಘಟನೆಗಳನ್ನು ವ್ಲಾಗ್ ಮಾಡಿ ಶೇರ್ ಮಾಡುತ್ತಾರೆ. ಲೈಕ್ಸ್, ಫಾಲೋವರ್ಸ್ ಗಳಿಸಲು ಕೆಲವರು ಹುಚ್ಚು ವಿಡಿಯೋಗಳನ್ನು ಮಾಡಿ ಶೇರ್ ಮಾಡುತ್ತಾರೆ. ಇತ್ತೀಚಿನ ಉದಾಹರಣೆಯಾಗಿ, ನವ ಜೋಡಿ ತಮ್ಮ ಫಸ್ಟ್ ನೈಟ್ ವ್ಲಾಗ್ ಮಾಡಿ ಶೇರ್ ಮಾಡಿದ್ದು, ಅದು ವೈರಲ್ ಆಗಿದೆ.

ಸುನಂದಾ ರಾಯ್ (SaffronSunanda) ಅವರ ಟ್ವೀಟ್:
ಸುನಂದಾ ರಾಯ್ (SaffronSunanda) ಎಂಬವರು ಈ ಕುರಿತ ಪೋಸ್ಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, “ಶೋಭನದ ವ್ಲಾಗ್ ಅಂತೆ, ಈ ವ್ಲಾಗರ್ಸ್ ಸಂಪೂರ್ಣವಾಗಿ ಹುಚ್ಚರಾಗುತ್ತಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.
Also Read: ವೈರಲ್ ವಿಡಿಯೋ: ಬಸ್ ಕಿಟಕಿ ಹೊರಗೆ ಹಾಕಿದ ‘ಕೈ’ ಎರಡು ತುಂಡಾಯ್ತು, ಕ್ಯಾಮೆರಾದಲ್ಲಿ ಸೆರೆ
ವೈರಲ್ ವಿಡಿಯೋ ವಿಷಯ:
ವೀಡಿಯೋದಲ್ಲಿ, ಮದುಮಗ “ಹಾಯ್” ಎಂದು ವ್ಲಾಗ್ ಶುರುಮಾಡಿ, ತನ್ನ ಪತ್ನಿಯನ್ನು ಪರಿಚಯಿಸಿ, ನಂತರ ರೂಮ್ ಡೆಕೋರೇಷನ್ ತೋರಿಸುತ್ತಾರೆ. ನಂತರ ಪತ್ನಿಗೆ ಸಿಹಿ ಮುತ್ತನ್ನು ನೀಡಿದ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ (ಎಕ್ಸ್ ಖಾತೆ) Click Here
Suhagraat Vlog 🥴
These vloggers have gone totally mad.
Wait for the blurred clip 😹 https://t.co/PMsiC5dS6U
— Sunanda Roy 👑 (@SaffronSunanda) July 5, 2024
ವೀಡಿಯೋ ವೀಕ್ಷಣೆಗಳು ಮತ್ತು ಕಾಮೆಂಟ್ಸ್:
ಜುಲೈ 5 ರಂದು ಹಂಚಿಕೊಳ್ಳಲಾದ ಈ ವೀಡಿಯೋ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಇತ್ತೀಚಿಗೆ ಜನರು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು, ಈ ಜನರು ಲೈಕ್ಸ್, ಫಾಲೋವರ್ಸ್‌ಗಾಗಿ ಯಾವ ಮಟ್ಟಕ್ಕೂ ಹೋಗ್ತಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ.
ಈ ಘಟನೆ ಯು-ಟ್ಯೂಬ್ ವ್ಲಾಗರ್‌ಗಳ ನಡುವೆ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳಲು ನವೀನ ಮಾರ್ಗಗಳನ್ನು ಹುಡುಕುವ ಪ್ರವೃತ್ತಿಯ ಒಂದು ಉದಾಹರಣೆಯಾಗಿದೆ.