ಪುಣೆ: ಲೋನಾವಾಲಾದಲ್ಲಿ ಒಂದೇ ಕುಟುಂಬದ ಐವರು ಹಿನ್ನೀರಿನ ಜಲಪಾತದಲ್ಲಿ ಕೊಚ್ಚಿಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದನ್ನು ನೀವು ನಿನ್ನೆಯಷ್ಟೇ ನೋಡಿದ್ದೀರಿ. ಇದೀಗ ಪುಣೆಯಲ್ಲಿ ಮತ್ತೊಂದು ದುರಂತ ನಡೆದಿದ್ದು, ಜಲಪಾತದಲ್ಲಿ ಟ್ರೆಕ್ಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿರುವ ವಿಡಿಯೋ ಆತನ 10 ವರ್ಷದ ಮಗಳ ಮೊಬೈಲ್ನಲ್ಲಿ ಸೆರೆಹಿಡಿದಿದೆ.
ಟ್ರೆಕ್ ಲೀಡರ್ ಆಗಿದ್ದ ಈ ವ್ಯಕ್ತಿ ಜನಪ್ರಿಯ ಪಿಕ್ನಿಕ್ ತಾಣದಲ್ಲಿ ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸುತ್ತಿದ್ದರು. ಪುಣೆಯಲ್ಲಿ ಅವರು ಜಲಪಾತಕ್ಕೆ ಧುಮುಕಲು ನಿರ್ಧರಿಸಿದರು. ಆತ ನೀರಿನ ಹೊಂಡದಿಂದ ಈಜಿ ಮೇಲೆ ಬರುತ್ತೇನೆ ಎಂಬ ವಿಶ್ವಾಸದಲ್ಲಿ ಇದ್ದನು. ದಡದಲ್ಲಿ ನಿಂತಿದ್ದ 10 ವರ್ಷದ ಮಗಳು, ತನ್ನ ತಂದೆಯ ಸಾಹಸವನ್ನು ರೆಕಾರ್ಡ್ ಮಾಡುತ್ತಿತ್ತು. ಆದರೆ, ಜಲಪಾತದ ರಭಸಕ್ಕೆ ತಾನು ಕೊಚ್ಚಿಹೋಗುವುದನ್ನು ಆತ ಊಹಿಸಿರಲಿಲ್ಲ.
Also Read: ಚಂದ್ರನಲ್ಲಿಗೆ ಹಾರಲಿದ್ದಾರೆ ಪ್ರಧಾನಿ ಮೋದಿ
ವ್ಯಕ್ತಿಯು, ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸುಮಾರು 20 ಜನರ ಸಮೂಹದೊಂದಿಗೆ ಟ್ರೆಕ್ಕಿಂಗ್ಗೆ ಹೋಗಿದ್ದನು. ಅವರು ಜಲಪಾತಕ್ಕೆ ಧುಮುಕಲು ನಿರ್ಧರಿಸಿದರು, ಆದರೆ ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗುತ್ತಾನೆ. ಆ ವ್ಯಕ್ತಿಯ 10 ವರ್ಷದ ಮಗಳು ತನ್ನ ತಂದೆಯ ಸಾಹಸವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದಳು. ಆ ವ್ಯಕ್ತಿಯು ಮೇಲಕ್ಕೆ ಏರಲು ಸಹಾಯಕ್ಕಾಗಿ ಹರಸಾಹಸ ಪಡುತ್ತಿರುವ ದೃಶ್ಯವು ಈ ವಿಡಿಯೋದಲ್ಲಿ ಸೆರೆಯಾಗಿದೆ.