ಬಾಲ್ಯದಿಂದಲೆ ಕಷ್ಟಗಳನ್ನು ಎದುರಿಸಿ ಬೆಳೆದ ಅಲಿಬಾಬಾ ಗ್ರೂಪ್ ಸಂಸ್ಥಾಪಕ ಜಾಕ್ ಮಾ(Jack Ma) ಅವರ ಸಾಧನೆ ಅಸಾಧಾರಣ. ಅವರು ಈಗ ಜನಮನದಿಂದ ದೂರ ಇದ್ದರೂ, ಒಂದು ಕಾಲದಲ್ಲಿ ಉದ್ಯಮ ರಂಗದ ದಿಗ್ಗಜರನ್ನು ಸೈಡ್ಲೈನ್ ಮಾಡಿ ಏಷ್ಯಾದ ನಂಬರ್ 1 ಶ್ರೀಮಂತರಾಗಿ ಕಿರೀಟ ಧರಿಸಿದ್ದರು.
ಅಸಾಧಾರಣ ಯಶಸ್ಸು ಪಡೆದ ಜಾಕ್ ಮಾ
ಅಲಿಬಾಬಾ(Alibaba) ಗ್ರೂಪ್ನ ಸೃಷ್ಟಿಕರ್ತ ಜಾಕ್ ಮಾ, ಕೆಲ ವರ್ಷಗಳ ಹಿಂದೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. 2020 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು ಮೀರಿಸುವವರೆಗೆ, ಮಾ ಅವರ ನಿವ್ವಳ ಮೌಲ್ಯ $ 61.7 ಶತಕೋಟಿಯಷ್ಟು ಹೆಚ್ಚಿತ್ತು.

ಜಾಕ್ ಮಾ ಜನ್ಮನಿಂದಲೇ ಕಷ್ಟ, ಯಶಸ್ಸಿನ ಹಾದಿ
ಚೀನಾದ ಹ್ಯಾಂಗ್ಝೌನಲ್ಲಿ 1964 ರಲ್ಲಿ ಜನಿಸಿದ ಜಾಕ್ ಮಾ, ಪ್ರಾರಂಭಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರು. ಹಲವಾರು ಉದ್ಯೋಗಗಳಲ್ಲೂ ವಿಫಲರಾಗಿದ್ದ ಜಾಕ್ ಮಾ, 1995ರಲ್ಲಿ ಇಂಟರ್ನೆಟ್ ಉದ್ಯಮ ‘ಚೈನಾ ಪೇಜಸ್’ ಅನ್ನು ಸಹ-ಸ್ಥಾಪಿಸಿದರು.
Also Read: ಬೈಜೂಸ್ ಕಥೆ: ತನಿಖೆಯಲ್ಲಿ ಪತ್ತೆಯಾಗದ ವಂಚನೆ; 4,000 ಕೋಟಿ ರೂ.ಗೂ ಹೆಚ್ಚು ಸಾಲ ರೈಟ್ ಆಫ್ ಮಾಡಿದ ಪ್ರೋಸಸ್
ಅಲ್ಲಿಂದ 1999 ರಲ್ಲಿ ಅಲಿಬಾಬಾ ಸ್ಥಾಪನೆ
ಜಾಕ್ ಮಾ 1999 ರಲ್ಲಿ ಅಲಿಬಾಬಾ ಸಂಸ್ಥೆಯನ್ನು ಸ್ಥಾಪಿಸಿದರು. ಅಲಿಬಾಬಾ ಗ್ರೂಪ್ ಈಗ ಇ-ಕಾಮರ್ಸ್, ಡಿಜಿಟಲ್ ಪಾವತಿಗಳು, ಮನರಂಜನೆ, ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಸೇವೆಗಳನ್ನು ಒದಗಿಸುತ್ತಿದೆ. ಅಲಿಬಾಬಾ ಭಾರತದಲ್ಲಿಯೂ ಸಾಕಷ್ಟು ಹೂಡಿಕೆ ಹೊಂದಿದ್ದು, ಫುಡ್ ಡೆಲಿವರಿ ಆಪ್ ಝೊಮ್ಯಾಟೋ, ಆನ್ಲೈನ್ ಗ್ರೋಸರಿ ಕಂಪನಿ ಬಿಗ್ಬಾಸ್ಕೆಟ್, ಇ-ಕಾಮರ್ಸ್ ಕಂಪನಿ ಸ್ನಾಪ್ಡೀಲ್ ಸೇರಿದಂತೆ ಹಲವು ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಿದೆ.

ಈಗ ಏನಾಗುತ್ತಿದೆ?
ಈಗ ಜಾಕ್ ಮಾಅವರ ನಿವ್ವಳ ಮೌಲ್ಯವು ಸುಮಾರು $ 30 ಬಿಲಿಯನ್ ಆಗಿದ್ದು, 2020 ರಾದ್ಯಂತ ಅವರ ಹಳೆಯ ಸಂಪತ್ತಿನ ಅರ್ಧಕ್ಕಿಂತ ಕಡಿಮೆ. 2020ರಲ್ಲಿ ಚೀನಾ ಸರಕಾರ ಅಲಿಬಾಬಾ ವಿರುದ್ಧ ತನಿಖೆ ಪ್ರಾರಂಭಿಸಿದ ನಂತರ, ಜಾಕ್ ಮಾ ಜನಮನದಿಂದ ದೂರ ಉಳಿದಿದ್ದಾರೆ. 2023ರಲ್ಲಿ ‘ಹ್ಯಾಂಗ್ಝೌ ಮಾಸ್ ಕಿಚನ್ ಫುಡ್’ ಕಂಪನಿಯಲ್ಲಿ $1.4 ಮಿಲಿಯನ್ ಹೂಡಿಕೆ ಮಾಡಿ, ಜಾಕ್ ಮಾ ಮತ್ತೆ ಉದ್ಯಮದಲ್ಲಿ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದಾರೆ.

ಚೀನಾ ಸರ್ಕಾರದ ನಿಯಂತ್ರಣ
2020ರಿಂದಲೂ, ಚೀನಾ ಸರ್ಕಾರ ಜಾಕ್ ಮಾ ಅವರ ಚಟುವಟಿಕೆಗಳ ಮೇಲೆ ಹೆಚ್ಚು ನಿಯಂತ್ರಣವನ್ನು ಪ್ರಯೋಗಿಸುತ್ತಿದೆ. ಇದರ ಪರಿಣಾಮವಾಗಿ, ಜಾಕ್ಮಾ ಅವರು ಬಿಸಿನೆಸ್ ರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ತಮ್ಮ ಸಂಕಷ್ಟಗಳ ವಿರುದ್ಧ ಹೋರಾಟ ಮಾಡುತ್ತಾ, ವಿಶ್ವದಾದ್ಯಂತ ತನ್ನ ಸಾಧನೆಯನ್ನ ಸಾರಿದ ಜಾಕ್ ಮಾ, ಏಷ್ಯಾದ ನಂಬರ್ 1 ಶ್ರೀಮಂತರಾಗಿ ಮೆರೆದಿದ್ದು, ಇಂದಿಗೂ ಶ್ರೇಷ್ಠವಾಗಿದೆ.